PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.9.1
KANJV-BSI ದೇವರು

ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ - ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
 
Dēvaru nōhanannū avana makkaḷannū āśīrvadisi avarige - bahusantānavuḷḷavarāgi hecciri; bhūlōkadallellā tumbikoḷḷiri.

ಆದಿಕಾಂಡ 9
ಆದಿಕಾಂಡ 9:1-17

The Covenant of the Rainbow

1 ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ - ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
 
Dēvaru nōhanannū avana makkaḷannū āśīrvadisi avarige - bahusantānavuḷḷavarāgi hecciri; bhūlōkadallellā tumbikoḷḷiri.
2 ಭೂವಿುಯ ಮೇಲಿರುವ ಎಲ್ಲಾ ಮೃಗಗಳೂ ಆಕಾಶದ ಎಲ್ಲಾ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಗಳೂ ಸಮುದ್ರದ ಮೀನುಗಳೂ ನಿಮಗೆ ಬೆದರಿ ಅಂಜಿಕೊಳ್ಳುವವು; ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ.
 
Bhūviuya mēliruva ellā mr̥gagaḷū ākāśada ellā pakṣigaḷū nelada mēle haridāḍuva ellā kriviugaḷū samudrada mīnugaḷū nimage bedari an̄jikoḷḷuvavu; nānu avugaḷannellā nim'ma svādhīnakke koṭṭiddēne.
3 ಭೂವಿುಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.
 
Bhūviuya mēle tiruguva ellā jīvajantugaḷū nimage āhāravāgiruvavu. Nānu nim'ma āhārakke pairugaḷannu koṭṭante ivugaḷannū koṭṭiddēne.
4 ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.
 
Ādare raktadinda kūḍiruva mānsavannu nīvu tinnabāradu; raktavu jīvavaṣṭe.
5 ಇದಲ್ಲದೆ ನಿಮ್ಮ ರಕ್ತವನ್ನು ಸುರಿಸಿ ಜೀವತೆಗೆಯುವವರಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ ಮನುಷ್ಯನಾಗಿದ್ದರೆ, ಹತವಾದವನು ಅವನ ಸಹೋದರನಾಗಿರುವದರಿಂದ, ಅವನಿಗೂ ಮುಯ್ಯಿ ತೀರಿಸುವೆನೆಂದು ತಿಳಿದುಕೊಳ್ಳಿರಿ.
 
Idallade nim'ma raktavannu surisi jīvategeyuvavarige muyyitīrisuvenu. Mr̥gavāgiddare adakkū manuṣyanāgiddare, hatavādavanu avana sahōdaranāgiruvadarinda, avanigū muyyi tīrisuvenendu tiḷidukoḷḷiri.
6 ನರಹತ್ಯವು ಸಹೋದರ ಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.
 
Narahatyavu sahōdara hatyavallavē. Dēvaru manuṣyarannu tanna svarūpadalliyē uṇṭumāḍidanāddarinda yāru manuṣyana raktavannu surisuttārō avara raktavannu manuṣyarē surisuvaru.
7 ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂವಿುಯ ಮೇಲೆ ನಿಮಗೆ ಬಹು ಸಂತಾನವಾಗಲಿ ಎಂದು ಹೇಳಿದನು.
 
Nīvu abhivr̥d'dhiyāgi hecciri; bhūviuya mēle nimage bahu santānavāgali endu hēḷidanu.
8 ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ -
 
Idallade dēvaru nōhanigū avana makkaḷigū -
9 ಕೇಳಿರಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ
 
Kēḷiri, nānu nim'mannū nim'ma santatiyavarannū
10 ನಿಮ್ಮ ಕೂಡ ನಾವೆಯಿಂದ ಹೊರಟುಬಂದ ಪಶುಪಕ್ಷಿಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಸ್ಥಿರಪ್ರತಿಜ್ಞೆ ಮಾಡುತ್ತೇನೆ;
 
Nim'ma kūḍa nāveyinda horaṭubanda paśupakṣimr̥gādi sakala bhūjantugaḷannū kuritu sthirapratijñe māḍuttēne;
11 ಆ ಪ್ರತಿಜ್ಞೆ ಯಾವದೆಂದರೆ - ಇನ್ನು ಮೇಲೆ ಎಲ್ಲಾ ಪ್ರಾಣಿಗಳು ಪ್ರಳಯದಿಂದ ನಾಶವಾಗುವದಿಲ್ಲ; ಇನ್ನು ಮುಂದೆ ಭೂವಿುಯನ್ನು ಹಾಳು ಮಾಡುವ ಪ್ರಳಯವು ಬರುವದೇ ಇಲ್ಲ ಎಂದು ಹೇಳಿದನು.
 
Ā pratijñe yāvadendare - innu mēle ellā prāṇigaḷu praḷayadinda nāśavāguvadilla; innu munde bhūviuyannu hāḷu māḍuva praḷayavu baruvadē illa endu hēḷidanu.
12 ದೇವರು ಮತ್ತೂ ಹೇಳಿದ್ದೇನಂದರೆ - ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ಎಲ್ಲಾ ತಲತಲಾಂತರಗಳಲ್ಲಿಯೂ ಮಾಡುವ ಈ ಪ್ರತಿಜ್ಞೆಗೆ
 
Dēvaru mattū hēḷiddēnandare - nānu nim'mannū nim'ma saṅgaḍa iruva samasta jīvarāśigaḷannū kuritu ellā talatalāntaragaḷalliyū māḍuva ī pratijñege
13 ಮೇಘಗಳಲ್ಲಿ ನಾನಿಟ್ಟಿರುವ ಮುಗಿಲುಬಿಲ್ಲೇ ಗುರುತಾಗಿರುವದು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತಾಗಿರಲಿ.
 
Mēghagaḷalli nāniṭṭiruva mugilubillē gurutāgiruvadu. Nanagū bhūprāṇigaḷigū āda oḍambaḍikege idē gurutāgirali.
14 ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡು ಬರುವದು.
 
Nānu bhūlōkada mēle mēghagaḷannu kavisuvāga ā billu mēghagaḷalli kaṇḍu baruvadu.
15 ಆಗ ನಾನು ನಿಮ್ಮನ್ನೂ ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಪ್ರತಿಜ್ಞೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಪ್ರಾಣಿಗಳನ್ನು ಹಾಳುಮಾಡುವ ಪ್ರಳಯವಾಗುವದಿಲ್ಲ.
 
Āga nānu nim'mannū ellā jīvarāśigaḷannū kuritu māḍida pratijñeyannu jñāpakamāḍikoḷḷuvenu. Innu munde nīru hecci ellā bhūprāṇigaḷannu hāḷumāḍuva praḷayavāguvadilla.
16 ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂವಿುಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು ಅಂದನು.
 
Ā billu mēghagaḷalli kāṇisuvāga nānu adannu nōḍi dēvarāda nanagū bhūviuya mēliruva ellā jīvajantugaḷigū āda śāśvatavāda oḍambaḍikeyannu jñāpakamāḍikoḷḷuvenu andanu.
17 ಮತ್ತು ದೇವರು ನೋಹನಿಗೆ - ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು ಎಂದು ಹೇಳಿದನು.
 
Mattu dēvaru nōhanige - nanagū ellā bhūjīvigaḷigū āda oḍambaḍikege idē gurutu endu hēḷidanu.

Noah’s Shame and Canaan’s Curse

18 ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್ ಹಾಮ್ ಯೆಫೆತ್ ಎಂಬವರೇ (ಹಾಮನು ಕಾನಾನನ ತಂದೆಯು).
 
Nāveyinda horaṭubanda nōhana makkaḷu śēm hām yephet embavarē (hāmanu kānānana tandeyu).
19 ಈ ಮೂವರು ನೋಹನ ಮಕ್ಕಳು; ಇವರಿಂದಲೇ ಭೂವಿುಯಲ್ಲೆಲ್ಲಾ ಹರಡಿಕೊಂಡಿರುವ ಜನರು ಉತ್ಪತ್ತಿಯಾದರು.
 
Ī mūvaru nōhana makkaḷu; ivarindalē bhūviuyallellā haraḍikoṇḍiruva janaru utpattiyādaru.
20 ನೋಹನು ವ್ಯವಸಾಯಗಾರನಾಗಿದ್ದನು; ಅವನೇ ದ್ರಾಕ್ಷೇತೋಟವನ್ನು ಪ್ರಾರಂಭಿಸಿದನು.
 
Nōhanu vyavasāyagāranāgiddanu; avanē drākṣētōṭavannu prārambhisidanu.
21 ಅವನು ದ್ರಾಕ್ಷಾರಸವನ್ನು ಕುಡಿಯಲು ಅಮಲೇರಿದ್ದರಿಂದ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು.
 
Avanu drākṣārasavannu kuḍiyalu amalēriddarinda guḍāradalli bettaleyāgi biddiddanu.
22 ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವದನ್ನು ಕಂಡು ಹೊರಗಿದ್ದ ಅಣ್ಣತಮ್ಮಂದಿರಾದ ಶೇಮ್ ಯೆಫೆತರಿಗೆ ತಿಳಿಸಿದನು.
 
Kānānana tandeyāda hāmanu tandeyu bettaleyāgiruvadannu kaṇḍu horagidda aṇṇatam'mandirāda śēm yephetarige tiḷisidanu.
23 ಇವರಿಬ್ಬರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂದ್ಹಿಂದಕ್ಕೆ ನಡೆದು ತಂದೆಗೆ ಹೊದಿಸಿ ಅವನ ಮಾನವನ್ನು ಕಾಪಾಡಿದರು; ಅವರು ಹಿಮ್ಮುಖರಾಗಿದ್ದದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ.
 
Ivaribbaru kambaḷiyannu tegedukoṇḍu tam'mibbara bennina mēle hākikoṇḍu hind'hindakke naḍedu tandege hodisi avana mānavannu kāpāḍidaru; avaru him'mukharāgiddadarinda tandeyu bettaleyāgiddaddannu nōḍalilla.
24 ನೋಹನು ಅಮಲಿಳಿದೆದ್ದು ಕಿರೀಮಗನು ಮಾಡಿದ್ದನ್ನು ತಿಳಿದು -
 
Nōhanu amaliḷideddu kirīmaganu māḍiddannu tiḷidu -
25 ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ ಅಂದನು.
 
Kānānanu śāpagrastanāgali. Avanu tanna aṇṇatam'mandirige dāsānudāsanāgali andanu.

Shem’s Blessing and Noah’s Death

26 ಅವನು ಇನ್ನೂ ನುಡಿದದ್ದೇನಂದರೆ - ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಕಾನಾನನು ಅವರಿಗೆ ದಾಸನಾಗಲಿ.
 
Avanu innū nuḍidaddēnandare - śēmana dēvarāda yehōvanige stōtravāgali; kānānanu avarige dāsanāgali.
27 ಯೆಫೆತನನ್ನು#9.27 ಯೆಫೆತ್ ಅಂದರೆ ವಿಸ್ತೀರ್ಣ. ದೇವರು ವಿಸ್ತರಿಸಲಿ. ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ. ಕಾನಾನನು ಅವರಿಗೆ ದಾಸನಾಗಿರಲಿ ಎಂಬದು.
 
Yephetanannu dēvaru vistarisali. Avanu śēmana guḍāragaḷalli vāsavāgirali. Kānānanu avarige dāsanāgirali embadu.
28 ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರುಷ ಬದುಕಿದನು.
 
Praḷayavāda mēle nōhanu munnūraivattu varuṣa badukidanu.
29 ಅವನು ಒಟ್ಟು ಒಂಭೈನೂರೈವತ್ತು ವರುಷ ಬದುಕಿ ಸತ್ತನು.
 
Avanu oṭṭu ombhainūraivattu varuṣa baduki sattanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.