PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.8.1

ತರುವಾಯ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಮೃಗಪಶುಗಳನ್ನೂ ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.
 
Taruvāya dēvaru nōhanannū avana saṅgaḍa nāveyallidda ellā mr̥gapaśugaḷannū nenapige tandukoṇḍu bhūlōkada mēle gāḷi bīsuvante māḍalāgi nīru taggitu.

ಆದಿಕಾಂಡ 8
ಆದಿಕಾಂಡ 8:1-5

The Ark Rests on Ararat

1 ತರುವಾಯ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಮೃಗಪಶುಗಳನ್ನೂ ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.
 
Taruvāya dēvaru nōhanannū avana saṅgaḍa nāveyallidda ellā mr̥gapaśugaḷannū nenapige tandukoṇḍu bhūlōkada mēle gāḷi bīsuvante māḍalāgi nīru taggitu.
2 ಭೂವಿುಯ ಕೆಳಗಿರುವ ಸಾಗರದ ಸೆಲೆಗಳೂ ಆಕಾಶದ ತೂಬುಗಳೂ ಮುಚ್ಚಿಹೋದವು. ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಗ ಭೂವಿುಯ ಮೇಲಿದ್ದ ನೀರು ಕ್ರಮವಾಗಿ ತಗ್ಗುತ್ತಾ ಬಂತು.
 
Bhūviuya keḷagiruva sāgarada selegaḷū ākāśada tūbugaḷū muccihōdavu. Ākāśadinda suriyuttidda maḷe nintuhōyitu. Āga bhūviuya mēlidda nīru kramavāgi tagguttā bantu.
3 ಹೀಗೆ ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆಯಾಯಿತು.
 
Hīge nūraivattu dinagaḷāda mēle nīru kaḍimeyāyitu.
4 ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಸೀಮೆಯ ಬೆಟ್ಟಗಳಲ್ಲಿ ನಿಂತಿತು.
 
Ēḷaneya tiṅgaḷina hadinēḷaneya dinadalli nāveyu arārāṭ sīmeya beṭṭagaḷalli nintitu.
5 ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆ ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಬಂದವು.
 
Hattaneya tiṅgaḷinavaregū nīru kaḍime kaḍimeyāguttā bantu. Hattaneya tiṅgaḷina modalaneya dinadalli beṭṭagaḷa śikharagaḷu kāṇabandavu.

Noah Sends a Raven and a Dove

6 ನಾಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯನ್ನು ಹೊರಕ್ಕೆ ಬಿಟ್ಟನು.
 
Nālvattu dinagaḷāda mēle nōhanu tānu māḍida nāveya kiṭakiyannu teredu kāgeyannu horakke biṭṭanu.
7 ಭೂವಿುಯ ಮೇಲಿದ್ದ ನೀರು ಒಣಗುವ ತನಕ ಆ ಕಾಗೆ ಹೋಗುತ್ತಾ ಬರುತ್ತಾ ಇತ್ತು.
 
Bhūviuya mēlidda nīru oṇaguva tanaka ā kāge hōguttā baruttā ittu.
8 ಹೀಗಿರಲಾಗಿ ನೀರು ಇಳಿಯಿತೋ ಇಲ್ಲವೋ ಎಂದು ತಿಳುಕೊಳ್ಳುವದಕ್ಕೆ ನೋಹನು ಪಾರಿವಾಳವನ್ನು ಹೊರಕ್ಕೆ ಬಿಟ್ಟನು.
 
Hīgiralāgi nīru iḷiyitō illavō endu tiḷukoḷḷuvadakke nōhanu pārivāḷavannu horakke biṭṭanu.
9 ನೀರು ಭೂವಿುಯ ಮೇಲೆಲ್ಲಾ ಇರುವದರಿಂದ ಪಾರಿವಾಳವು ಕಾಲಿಡುವದಕ್ಕೆ ಸ್ಥಳವನ್ನು ಎಲ್ಲಿಯೂ ಕಾಣದೆ ತಿರಿಗಿ ನಾವೆಗೆ ಬಂತು. ನೋಹನು ಕೈಚಾಚಿ ಅದನ್ನು ಹಿಡಿದು ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.
 
Nīru bhūviuya mēlellā iruvadarinda pārivāḷavu kāliḍuvadakke sthaḷavannu elliyū kāṇade tirigi nāvege bantu. Nōhanu kaicāci adannu hiḍidu nāveyalli tanna baḷige tegedukoṇḍanu.
10 ಅವನು ಇನ್ನೂ ಏಳು ದಿವಸ ತಡೆದು ಪಾರಿವಾಳವನ್ನು ತಿರಿಗಿ ಹೊರಕ್ಕೆ ಬಿಟ್ಟನು.
 
Avanu innū ēḷu divasa taḍedu pārivāḷavannu tirigi horakke biṭṭanu.
11 ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರಿಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂವಿುಯ ಮೇಲಿಂದ ಹರಿದು ಇಳಿದು ಹೋಯಿತು ಎಂದು ತಿಳುಕೊಂಡನು.
 
San̄jeyalli ā pārivāḷavu avana baḷige tirigi baralu, āhā, adara bāyalli eṇṇēmarada hosa ciguru ittu. Nōhanu adannu nōḍi nīru bhūviuya mēlinda haridu iḷidu hōyitu endu tiḷukoṇḍanu.
12 ಮತ್ತೇಳು ದಿವಸದ ಮೇಲೆ ಪಾರಿವಾಳವನ್ನು ಬಿಡಲು ಅದು ಅವನ ಬಳಿಗೆ ತಿರಿಗಿ ಬರಲೇ ಇಲ್ಲ.
 
Mattēḷu divasada mēle pārivāḷavannu biḍalu adu avana baḷige tirigi baralē illa.

Exiting the Ark

13 ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಭೂವಿುಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಲಾಗಿ, ಆಹಾ, ಭೂವಿುಯು ಆರಿಹೋಗಿತ್ತು.
 
Ārunūra ondaneya varuṣada modalaneya tiṅgaḷina modalaneya dinadalli bhūviuya mēlidda nīru iḷidittu. Nōhanu nāveya gavasaṇigeyannu tegedu nōḍalāgi, āhā, bhūviuyu ārihōgittu.
14 ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂವಿುಯು ಒಣಗಿತ್ತು.
 
Eraḍaneya tiṅgaḷina ippattēḷaneya dinadalli bhūviuyu oṇagittu.
17 ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿವಿು ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂವಿುಯ ಮೇಲೆ ಬಹುಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ ಎಂದು ಆಜ್ಞಾಪಿಸಲು
 
Ninna baḷiyalliruva paśu, pakṣi, kriviu muntāda ellā jīvigaḷū horage barali; avugaḷige bhūviuya mēle bahusantānavāgali; avu abhivr̥d'dhiyāgi heccali endu ājñāpisalu
18 ನೋಹನು ಹೆಂಡತಿ - ಮಕ್ಕಳು ಸೊಸೆಯರು ಸಹಿತವಾಗಿ ಹೊರಗೆ ಬಂದನು.
 
Nōhanu heṇḍati - makkaḷu soseyaru sahitavāgi horage bandanu.
19 ಮೃಗ ಪಶುಪಕ್ಷಿಕ್ರಿವಿುಗಳೆಲ್ಲವು ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.
 
Mr̥ga paśupakṣikriviugaḷellavu tam'ma tam'ma jātiganusāravāgi nāveyinda horage bandavu.

Noah Builds an Altar

20 ಆಗ ನೋಹನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಮಾಡಿ ಅದರ ಮೇಲೆ ಶುದ್ಧವಾದ ಎಲ್ಲಾ ಪಶುಪಕ್ಷಿಜಾತಿಗಳಲ್ಲಿ ಸರ್ವಾಂಗಹೋಮ ಮಾಡಿದನು.
 
Āga nōhanu yehōvanigōskara yajñavēdiyannu māḍi adara mēle śud'dhavāda ellā paśupakṣijātigaḷalli sarvāṅgahōma māḍidanu.
21 ಅದರ ಸುವಾಸನೆಯು ಯೆಹೋವನಿಗೆ ಗಮಗವಿುಸಲು ಆತನು ಹೃದಯದೊಳಗೆ - ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು; ಆದರೂ ನಾನು ಇನ್ನು ಮೇಲೆ ಅವರ ನಿವಿುತ್ತವಾಗಿ ಭೂವಿುಯನ್ನು ಶಪಿಸುವದಿಲ್ಲ; ನಾನು ಎಲ್ಲಾ ಜೀವಿಗಳನ್ನೂ ಈಗ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವದಿಲ್ಲ.
 
Adara suvāsaneyu yehōvanige gamagamisalu ātanu hr̥dayadoḷage - manuṣyara manas'saṅkalpavu cikkandinindalē keṭṭaddu; ādarū nānu innu mēle avara nimittavāgi bhūmiyannu śapisuvadilla; nānu ellā jīvigaḷannū īga sanharisidante innu mēle sanharisuvadilla.
22 ಭೂವಿುಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ ಅಂದುಕೊಂಡನು.
 
Bhūviuyu iruva tanaka bittaneyū koyilū, caḷiyū sekeyū, bēsigekālavū himakālavū, hagalū iruḷū ivugaḷa krama tappuvadē illa andukoṇḍanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.