PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.6.1

ಭೂವಿುಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು
 
Bhūviuya mēle janaru heccuttā avarige heṇṇu makkaḷu huṭṭalu

ಆದಿಕಾಂಡ 6
ಆದಿಕಾಂಡ 6:1-7

Corruption on the Earth

1 ಭೂವಿುಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು
 
Bhūviuya mēle janaru heccuttā avarige heṇṇu makkaḷu huṭṭalu
2 ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.
 
Dēvaputraru manuṣyaputriyara saundaryavannu nōḍi tamage iṣṭarādavarannu heṇḍarannāgi māḍikoṇḍaru.
3 ಆಗ ಯೆಹೋವನು - ನನ್ನ#6.3 ಆದಿ. 2.7 ನೋಡಿರಿ. ಅಥವಾ: ನನ್ನ ಆತ್ಮವು ಮನುಷ್ಯರೊಡನೆ ಯಾವಾಗಲೂ ವಾದಿಸುವದಿಲ್ಲ. 1 ಪೇತ್ರ 3.19,20; ನೆಹೆ. 9.30; ಗಲಾ. 5.16,17 ಗಳನ್ನೂ ನೋಡಿರಿ. ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು#6.3 ಅಥವಾ: ಅವರು ಸಹ ಮರ್ತ್ಯರೇ. ಭ್ರಷ್ಟರಾದದರಿಂದ ಮರ್ತ್ಯರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ ಅಂದನು.
 
Āga yehōvanu - nanna ātmavu manuṣyaralli śāśvatavāgiruvadilla; avaru bhraṣṭarādadarinda martyarē. Avara āyuṣyavu nūra ippattu varuṣavāgirali andanu.
4 ಆ ಕಾಲದಲ್ಲಿ ಅಂದರೆ ದೇವಪುತ್ರರು ಮನುಷ್ಯಪುತ್ರಿಯರನ್ನು ಕೂಡಿ ಅವರಲ್ಲಿ ಮಕ್ಕಳನ್ನು ಪಡೆಯುವ ಕಾಲದಲ್ಲಿ ಮಹಾಶರೀರಿಗಳು#6.4 ಮೂಲ: ನೆಫೀಲಿಯರು. ಭೂವಿುಯ ಮೇಲಿದ್ದರು; ಅನಂತರದಲ್ಲಿಯೂ ಇದ್ದರು. ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.
 
Ā kāladalli andare dēvaputraru manuṣyaputriyarannu kūḍi avaralli makkaḷannu paḍeyuva kāladalli mahāśarīrigaḷu bhūviuya mēliddaru; anantaradalliyū iddaru. Pūrvadalli hesarugoṇḍa parākramaśāligaḷu ivarē.
5 ಮನುಷ್ಯರ ಕೆಟ್ಟತನವು ಭೂವಿುಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ
 
Manuṣyara keṭṭatanavu bhūviuya mēle heccāgiruvadannū avaru hr̥dayadalli yōcisuvadellavu yāvāgalū barī keṭṭaddāgiruvadannū
6 ಯೆಹೋವನು ನೋಡಿ ತಾನು ಭೂವಿುಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
 
Yehōvanu nōḍi tānu bhūviuya mēle manuṣyarannu uṇṭumāḍiddakke paścāttāpapaṭṭu tanna hr̥dayadalli nondukoṇḍanu.
7 ಮತ್ತು ಯೆಹೋವನು - ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂವಿುಯ ಮೇಲಿನಿಂದ ಅಳಿಸಿಬಿಡುವೆನು; ಅದನ್ನು ಉಂಟುಮಾಡಿದ್ದಕ್ಕೆ ನನ್ನಲ್ಲಿ ಪಶ್ಚಾತ್ತಾಪ ಹುಟ್ಟಿತು; ಮನುಷ್ಯರೊಂದಿಗೆ ಸಕಲಮೃಗ ಕ್ರಿವಿುಪಕ್ಷಿಗಳನ್ನೂ ಅಳಿಸಿ ಬಿಡುವೆನು ಅಂದುಕೊಂಡನು.
 
Mattu yehōvanu - nānu sr̥ṣṭisida manuṣya jātiyannu bhūviuya mēlininda aḷisibiḍuvenu; adannu uṇṭumāḍiddakke nannalli paścāttāpa huṭṭitu; manuṣyarondige sakalamr̥ga kriviupakṣigaḷannū aḷisi biḍuvenu andukoṇḍanu.

Noah’s Favor with God

8 ಆದರೆ ನೋಹನಿಗೆ ಯೆಹೋವನ ದಯವು ದೊರಕಿತು.
 
Ādare nōhanige yehōvana dayavu dorakitu.
9 ನೋಹನ ಚರಿತ್ರೆಯು - ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.
 
Nōhana caritreyu - nōhanu nītivantanū tanna kāladavaralli tappilladavanū āgiddanu; avanu dēvarondige an'yōn'yavāgi naḍedukoṇḍanu.
10 ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.
 
Śēm, hām, yephet emba mūru mandi makkaḷannu paḍedanu.
11 ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.
 
Bhūlōkadavaru dēvara dr̥ṣṭige keṭṭuhōgiddaru; an'yāyavu lōkavannu tumbikoṇḍittu.
12 ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟುಹೋಗಿತ್ತು; ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
 
Dēvaru lōkavannu nōḍidāga adu keṭṭuhōgittu; bhūnivāsigaḷellarū tam'ma naḍavaḷikeyannu keḍisikoṇḍiddaru.

Preparing the Ark

13 ಆಗ ದೇವರು ನೋಹನಿಗೆ - ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂವಿುಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ.
 
Āga dēvaru nōhanige - ellā dēhigaḷigū antyavannu tīrmānisiddēne; bhūlōkavu avara an'yāyadinda tumbi ade; nānu avarannū bhūviuya mēliruvadellavannū aḷisibiḍuttēne.
14 ನೀನು ತುರಾಯಿ ಮರದಿಂದ ನಾವೆಯನ್ನು#6.14 ಮೂಲ: ಪೆಟ್ಟಿಗೆಯನ್ನು. ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು.
 
Nīnu turāyi maradinda nāveyannu māḍikō; adaralli tumba kōṇegaḷu irabēku; oḷakkū horakkū rāḷavannu haccu.
15 ನೀನು ಅದನ್ನು ಮಾಡಬೇಕಾದ ವಿಧಾನ ಹೇಗಂದರೆ - ಅದು ಮುನ್ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು.
 
Nīnu adannu māḍabēkāda vidhāna hēgandare - adu munnūru moḷa uddavū aivattu moḷa agalavū mūvattu moḷa ettaravū uḷḷaddāgirabēku.
16 ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಬೆಳಕು ಕಂಡಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು.
 
Adara cāvaṇiya keḷage suttalū ondu moḷa ettarada beḷaku kaṇḍiyannu māḍabēku; pakkadalli bāgalanniḍabēku. Nāveyalli ondara mēle ondāgi mūru antastugaḷannu māḍabēku.
17 ನಾನಂತೂ ಭೂವಿುಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂವಿುಯಲ್ಲಿರುವ ಸಮಸ್ತವೂ ಲಯವಾಗುವದು.
 
Nānantū bhūviuya mēle jalapraḷayavannu baramāḍi ākāśada keḷagiruva sakala prāṇigaḷannū aḷisibiḍuvenu; bhūviuyalliruva samastavū layavāguvadu.
18 ಆದರೆ ನಿನ್ನ ಕೂಡ ನನ್ನ ನಿಬಂಧನೆಯನ್ನು ಮಾಡುತ್ತೇನೆ. ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು.
 
Ādare ninna kūḍa nanna nibandhaneyannu māḍuttēne. Nīnu heṇḍati makkaḷu soseyaru sahitavāgi nāveyalli sērabēku.
19 ಇದಲ್ಲದೆ ಜೀವಿಗಳ ಪ್ರತಿಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಉಳಿಸಿ ಕಾಪಾಡಬೇಕು.
 
Idallade jīvigaḷa pratijātiyalliyū ondu gaṇḍu ondu heṇṇu hīge eraḍeraḍannu nāveyalli sērisi ninnondige uḷisi kāpāḍabēku.
20 ಪಶು, ಪಕ್ಷಿ, ಕ್ರಿವಿು ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವದಕ್ಕಾಗಿ ನಿನ್ನ ಬಳಿಗೆ ಬರುವವು.
 
Paśu, pakṣi, kriviu ivugaḷa sakala jātigaḷalliyū eraḍeraḍu badukuvadakkāgi ninna baḷige baruvavu.
21 ಮತ್ತು ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಡಬೇಕು ಎಂದು ಹೇಳಿದನು.
 
Mattu ninagū avugaḷigū pōṣaṇeyāguvante sakala vidhavāda āhāra padārthagaḷannu ninna baḷiyalli kūḍisiḍabēku endu hēḷidanu.
22 ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.
 
Dēvaru appaṇekoṭṭa prakāravē nōhanu māḍidanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.