PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.5.1
KANJV-BSI ಯೇಸು

ಆದಾಮನ ವಂಶದವರ ಚರಿತ್ರೆಯು - ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಉಂಟುಮಾಡಿದನು.
 
Ādāmana vanśadavara caritreyu - dēvaru sr̥ṣṭikāladalli manuṣyanannu tanna hōlikege sariyāgi uṇṭumāḍidanu.

ಆದಿಕಾಂಡ 5
ಆದಿಕಾಂಡ 5:1-17

The Descendants of Adam

1 ಆದಾಮನ ವಂಶದವರ ಚರಿತ್ರೆಯು - ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಉಂಟುಮಾಡಿದನು.
 
Ādāmana vanśadavara caritreyu - dēvaru sr̥ṣṭikāladalli manuṣyanannu tanna hōlikege sariyāgi uṇṭumāḍidanu.
2 ಅವರನ್ನು ಗಂಡು ಹೆಣ್ಣಾಗಿ ಉಂಟುಮಾಡಿದನು. ಇದಲ್ಲದೆ ಅದೇ ದಿವಸದಲ್ಲಿ ಅವರನ್ನು ಆಶೀರ್ವದಿಸಿ ಅವರಿಗೆ ಮನುಷ್ಯ#5.2 ಮೂಲ: ಆದಾಮ್. ಎಂದು ಹೆಸರಿಟ್ಟನು.
 
Avarannu gaṇḍu heṇṇāgi uṇṭumāḍidanu. Idallade adē divasadalli avarannu āśīrvadisi avarige manuṣya endu hesariṭṭanu.
3 ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
 
Ādāmanu nūramūvattu varuṣadavanādāga rūpadalli tanna hōlikege sariyāda maganannu paḍedu avanige sētanendu hesariṭṭanu.
4 ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರುಷ ಬದುಕಿದನು.
 
Sētanu huṭṭida mēle ādāmanu gaṇḍu heṇṇu makkaḷannu paḍedu eṇṭunūru varuṣa badukidanu.
5 ಅವನು ಒಟ್ಟು ಒಂಭೈನೂರ ಮೂವತ್ತು ವರುಷ ಬದುಕಿ ಸತ್ತನು.
 
Avanu oṭṭu ombhainūra mūvattu varuṣa baduki sattanu.
6 ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು.
 
Sētanu nūra aidu varuṣadavanādāga enōṣanannu paḍedanu.
7 ಎನೋಷನು ಹುಟ್ಟಿದ ಮೇಲೆ ಸೇತನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಏಳು ವರುಷ ಬದುಕಿದನು.
 
Enōṣanu huṭṭida mēle sētanu gaṇḍu heṇṇu makkaḷannu paḍedu eṇṭunūra ēḷu varuṣa badukidanu.
8 ಅವನು ಒಟ್ಟು ಒಂಭೈನೂರ ಹನ್ನೆರಡು ವರುಷ ಬದುಕಿ ಸತ್ತನು.
 
Avanu oṭṭu ombhainūra hanneraḍu varuṣa baduki sattanu.
9 ಎನೋಷನು ತೊಂಭತ್ತು ವರುಷದವನಾದಾಗ ಕೇನಾನನನ್ನು ಪಡೆದನು.
 
Enōṣanu tombhattu varuṣadavanādāga kēnānanannu paḍedanu.
10 ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು.
 
Kēnānanu huṭṭida mēle enōṣanu gaṇḍu heṇṇu makkaḷannu paḍedu eṇṭunūra hadinaidu varuṣa badukidanu.
11 ಅವನು ಒಟ್ಟು ಒಂಭೈನೂರ ಐದು ವರುಷ ಬದುಕಿ ಸತ್ತನು.
 
Avanu oṭṭu ombhainūra aidu varuṣa baduki sattanu.
12 ಕೇನಾನನು ಎಪ್ಪತ್ತು ವರುಷದವನಾದಾಗ ಮಹಲಲೇಲನನ್ನು ಪಡೆದನು.
 
Kēnānanu eppattu varuṣadavanādāga mahalalēlanannu paḍedanu.
13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಾಲ್ವತ್ತು ವರುಷ ಬದುಕಿದನು.
 
Mahalalēlanu huṭṭida mēle kēnānanu gaṇḍu heṇṇu makkaḷannu paḍedu eṇṭunūra nālvattu varuṣa badukidanu.
14 ಅವನು ಒಟ್ಟು ಒಂಭೈನೂರ ಹತ್ತು ವರುಷ ಬದುಕಿ ಸತ್ತನು.
 
Avanu oṭṭu ombhainūra hattu varuṣa baduki sattanu.
15 ಮಹಲಲೇಲನು ಅರುವತ್ತೈದು ವರುಷದವನಾದಾಗ ಯೆರೆದನನ್ನು ಪಡೆದನು.
 
Mahalalēlanu aruvattaidu varuṣadavanādāga yeredanannu paḍedanu.
16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರುಷ ಬದುಕಿದನು.
 
Yeredanu huṭṭida mēle mahalalēlanu gaṇḍu heṇṇu makkaḷannu paḍedu eṇṭunūra mūvattu varuṣa badukidanu.
17 ಅವನು ಒಟ್ಟು ಎಂಟುನೂರ ತೊಂಭತ್ತೈದು ವರುಷ ಬದುಕಿ ಸತ್ತನು.
 
Avanu oṭṭu eṇṭunūra tombhattaidu varuṣa baduki sattanu.

God Takes Up Enoch

18 ಯೆರೆದನು ನೂರ ಅರುವತ್ತೆರಡು ವರುಷದವನಾದಾಗ ಹನೋಕನನ್ನು ಪಡೆದನು.
 
Yeredanu nūra aruvatteraḍu varuṣadavanādāga hanōkanannu paḍedanu.
19 ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರುಷ ಬದುಕಿದನು.
 
Hanōkanu huṭṭida mēle yeredanu eṇṭunūru varuṣa badukidanu.
20 ಅವನು ಒಟ್ಟು ಒಂಭೈನೂರ ಅರುವತ್ತೆರಡು ವರುಷ ಬದುಕಿ ಸತ್ತನು.
 
Avanu oṭṭu ombhainūra aruvatteraḍu varuṣa baduki sattanu.
21 ಹನೋಕನು ಅರುವತ್ತೈದು ವರುಷದವನಾದಾಗ ಮೆತೂಷೆಲಹನನ್ನು ಪಡೆದನು.
 
Hanōkanu aruvattaidu varuṣadavanādāga metūṣelahanannu paḍedanu.
22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರುಷ ಬದುಕಿದನು.
 
Metūṣelahanu huṭṭida mēle hanōkanu gaṇḍu heṇṇu makkaḷannu paḍedu dēvara an'yōn'yateyalli munnūru varuṣa badukidanu.
23 ಅವನು ಬದುಕಿದ ಕಾಲವೆಲ್ಲಾ ಮುನ್ನೂರ ಅರುವತ್ತೈದು ವರುಷ.
 
Avanu badukida kālavellā munnūra aruvattaidu varuṣa.
24 ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆ ಹೋದನು.
 
Hanōkanu dēvarondige an'yōn'yavāgi naḍedukoḷḷuttā iruvāga dēvaru avanannu karedukoṇḍaddarinda kāṇade hōdanu.

From Methuselah to Noah

25 ಮೆತೂಷೆಲಹನು ನೂರ ಎಂಭತ್ತೇಳು ವರುಷದವನಾದಾಗ ಲೆಮೆಕನನ್ನು ಪಡೆದನು.
 
Metūṣelahanu nūra embhattēḷu varuṣadavanādāga lemekanannu paḍedanu.
26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರುಷ ಬದುಕಿದನು.
 
Lemekanu huṭṭida mēle metūṣelahanu gaṇḍu heṇṇu makkaḷannu paḍedu ēḷunūra embhatteraḍu varuṣa badukidanu.
27 ಅವನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷ ಬದುಕಿ ಸತ್ತನು.
 
Avanu oṭṭu ombhainūra aruvattombhattu varuṣa baduki sattanu.
28 ಲೆಮೆಕನು ನೂರ ಎಂಭತ್ತೆರಡು ವರುಷದವನಾದಾಗ ಒಬ್ಬ ಮಗನನ್ನು ಪಡೆದು -
 
Lemekanu nūra embhatteraḍu varuṣadavanādāga obba maganannu paḍedu -
29 ಯೆಹೋವನು ಶಪಿಸಿದ ಭೂವಿುಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು ಎಂದು ಹೇಳಿ ಅವನಿಗೆ ನೋಹ#5.29 ನೋಹ ಅಂದರೆ ಉಪಶಮನ. ಎಂದು ಹೆಸರಿಟ್ಟನು.
 
Yehōvanu śapisida bhūviuyinda namage uṇṭāda kaikaṣṭadalliyū śrameyalliyū ī maganu nam'mannu upaśamanagoḷisuvanu endu hēḷi avanige nōha endu hesariṭṭanu.
30 ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರುಷ ಬದುಕಿದನು.
 
Nōhanu huṭṭida mēle lemekanu gaṇḍu heṇṇu makkaḷannu paḍedu ainūra tombhattaidu varuṣa badukidanu.
31 ಅವನು ಒಟ್ಟು ಏಳುನೂರ ಎಪ್ಪತ್ತೇಳು ವರುಷ ಬದುಕಿ ಸತ್ತನು.
 
Avanu oṭṭu ēḷunūra eppattēḷu varuṣa baduki sattanu.
32 ನೋಹನು ಐನೂರು ವರುಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.
 
Nōhanu ainūru varuṣadavanādāga śēm, hām, yephet emba mūru mandi makkaḷannu paḍedanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.