PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.3.1

ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು - ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು ಸ್ತ್ರೀಯು -
 
Yehōvadēvaru uṇṭumāḍida ellā bhūjantugaḷalli sarpavu yuktiyuḷḷaddāgittu. Adu strīya baḷige bandu - ēnavvā, tōṭadalliruva yāva marada haṇṇannū nīvu tinnabāradendu dēvaru appaṇekoṭṭiruvadu nijavō endu kēḷalu strīyu -

ಆದಿಕಾಂಡ 3
ಆದಿಕಾಂಡ 3:1-7

The Serpent’s Deception

1 ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು - ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು ಸ್ತ್ರೀಯು -
 
Yehōvadēvaru uṇṭumāḍida ellā bhūjantugaḷalli sarpavu yuktiyuḷḷaddāgittu. Adu strīya baḷige bandu - ēnavvā, tōṭadalliruva yāva marada haṇṇannū nīvu tinnabāradendu dēvaru appaṇekoṭṭiruvadu nijavō endu kēḷalu strīyu -
2 ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು;
 
Tōṭadalliruva maragaḷa haṇṇugaḷannu nāvu tinnabahudu;
3 ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ - ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು.
 
Ādare tōṭada madhyadalliruva ī marada phalada viṣayavāgi - idannu tinnalū kūḍadu, muṭṭalū kūḍadu; tindare sāyuviri endu dēvaru hēḷiddāne andaḷu.
4 ಆಗ ಸರ್ಪವು ಸ್ತ್ರೀಗೆ - ನೀವು ಹೇಗೂ ಸಾಯುವದಿಲ್ಲ;
 
Āga sarpavu strīge - nīvu hēgū sāyuvadilla;
5 ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು.
 
Nīvu idara haṇṇannu tindāgalē nim'ma kaṇṇugaḷu tereyuvavu; nīvu dēvarante āgi oḷḷēdara keṭṭaddara bhēdavannu aritavarāguviri; idu dēvarige cennāgi gottuṇṭu anditu.
6 ಆಗ ಸ್ತ್ರೀಯು - ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.
 
Āga strīyu - ā marada haṇṇu tinnuvadakke uttamavāgiyū nōḍuvadakke ramyavāgiyū jñānōdayakke apēkṣisatakkaddāgiyū ide endu tiḷidu adannu tegedukoṇḍu tindaḷu. Saṅgaḍa idda gaṇḍanigū koḍalu avanū tindanu.
7 ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು; ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.
 
Kūḍale avaribbara kaṇṇugaḷu teredavu; tāvu bettaleyāgiddēvendu tiḷidu an̄jūrada elegaḷannu holidu uṭṭukoṇḍaru.

God Arraigns Adam and Eve

8 ತರುವಾಯ ಯೆಹೋವದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಸ್ತ್ರೀಪುರುಷರು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು.
 
Taruvāya yehōvadēvaru san̄jeya taṅgāḷiyalli tōṭadoḷage san̄carisuttiruvāga ā strīpuruṣaru ātana sappaḷavannu kēḷi ātanige kāṇisabāradendu tōṭada maragaḷa hinde aḍagikoṇḍaru.
9 ಯೆಹೋವದೇವರು ಮನುಷ್ಯನನ್ನು -
 
Yehōvadēvaru manuṣyanannu -
10 ನೀನು ಎಲ್ಲಿರುತ್ತಿ ಎಂದು ಕೂಗಿ ಕೇಳಲು ಅವನು - ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅಡಗಿಕೊಂಡೆನು ಅಂದನು.
 
Nīnu ellirutti endu kūgi kēḷalu avanu - nīnu tōṭadalli san̄carisuva sappaḷavannu nānu kēḷi bettaleyāgiddēnallā endu hedari aḍagikoṇḍenu andanu.
11 ಅದಕ್ಕಾತನು - ನೀನು ಬೆತ್ತಲೆಯಾಗಿದ್ದಿ ಎಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿಯಾ ಎಂದು ಕೇಳಲು
 
Adakkātanu - nīnu bettaleyāgiddi endu ninage tiḷisidavarāru? Tinnabāradendu nānu ninage ājñāpisida marada haṇṇannu tindiyā endu kēḷalu
12 ಆ ಮನುಷ್ಯನು - ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು.
 
Ā manuṣyanu - nanna joteyalliruvadakke nīnu koṭṭa strīyu ā marada haṇṇannu nanage koṭṭaḷu; nānu tindenu endu hēḷidanu.
13 ಯೆಹೋವದೇವರು ಸ್ತ್ರೀಯನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಸ್ತ್ರೀಯು - ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು ಎಂದು ಉತ್ತರ ಕೊಟ್ಟಳು.
 
Yehōvadēvaru strīyannu - idēnu nīnu māḍiddu endu kēḷalu strīyu - sarpavu nannannu van̄cisitu, nānu tindenu endu uttara koṭṭaḷu.

The Fate of the Serpent

14 ಆಗ ಯೆಹೋವದೇವರು ಸರ್ಪಕ್ಕೆ - ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಮೃಗಗಳಲ್ಲಿಯೂ ಶಾಪಗ್ರಸ್ತವಾದಿ; ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣೇ ತಿನ್ನುವಿ.
 
Āga yehōvadēvaru sarpakke - nīnu ī kāryavannu māḍiddarinda ellā paśugaḷalliyū aḍaviya ellā mr̥gagaḷalliyū śāpagrastavādi; nīnu hoṭṭeyinda haridu ninna jīvamānada dinagaḷallellā maṇṇē tinnuvi.
15 ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.#3.15 ಮೂಲ: ಜಜ್ಜುವಿ. ಎಂದು ಹೇಳಿದನು.
 
Ninagū ī strīgū, ninna santānakkū ī strīya santānakkū hagetanaviruva hāge māḍuvenu. Īkeya santānavu ninna taleyannu jajjuvadu, nīnu adara him'maḍiyannu kaccuvi. Endu hēḷidanu.

The Punishment of Mankind

16 ಆಮೇಲೆ ಸ್ತ್ರೀಗೆ - ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇವಿುಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು. ಎಂದು ಹೇಳಿದನು.
 
Āmēle strīge - nīnu garbhiṇiyāgiruva kāladalli bahu saṅkaṭapaḍabēkendu nānu nēmisiddēne; kaṣṭadindalē makkaḷannu heruvi; gaṇḍana mēle ninage āśeyiruvadu; avanu ninage oḍeyanāguvanu. Endu hēḷidanu.
17 ಮತ್ತು ಪುರುಷನಿಗೆ - ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದಕಾರಣ ನಿನ್ನ ನಿವಿುತ್ತ ಭೂವಿುಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂವಿುಯ ಹುಟ್ಟುವಳಿಯನ್ನು ತಿನ್ನಬೇಕು.
 
Mattu puruṣanige - tinnabāradendu nānu ninage ājñāpisida marada phalavannu nīnu heṇḍatiya mātu kēḷi tindakāraṇa ninna niviutta bhūviuge śāpa bantu. Ninna jīvamānavellā duḍidu duḍidu bhūviuya huṭṭuvaḷiyannu tinnabēku.
18 ಆ ಭೂವಿುಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ.
 
Ā bhūviuyalli muḷḷugiḍagaḷū kaḷegaḷū bahaḷavāgi huṭṭuvavu. Holada beḷeyannu anubhavisuvi.
19 ನೀನು ತಿರಿಗಿ ಮಣ್ಣಿಗೆ ಸೇರುವತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ ಎಂದು ಹೇಳಿದನು.
 
Nīnu tirigi maṇṇige sēruvatanaka bevariḍuttā bēkāda āhāravannu sampādisabēku. Nīnu maṇṇininda tegeyalpaṭṭavanallavō; nīnu maṇṇē; punaḥ maṇṇige sēratakkavanāgiddī endu hēḷidanu.
20 ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ#3.20 ಹವ್ವ ಅಂದರೆ ಜೀವ. ಎಂದು ಹೆಸರಿಟ್ಟನು; ಯಾಕಂದರೆ ಬದುಕುವವರೆಲ್ಲರಿಗೂ ಅವಳೇ ಮೂಲಮಾತೆ.
 
Ā manuṣyanu tanna heṇḍatige havva endu hesariṭṭanu; yākandare badukuvavarellarigū avaḷē mūlamāte.

The Expulsion from Paradise

21 ಯೆಹೋವದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು.
 
Yehōvadēvaru ādāmanigū avana heṇḍatigū carmada aṅgigaḷannu māḍi toḍisidanu.
22 ಮತ್ತು ಯೆಹೋವದೇವರು - ಈ ಮನುಷ್ಯನು ಒಳ್ಳೇದರ ಕೆಟ್ಟದ್ದರ ಭೇದವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ. ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ ಬದುಕುವವನಾಗಬಾರದು ಅಂದುಕೊಂಡು
 
Mattu yehōvadēvaru - ī manuṣyanu oḷḷēdara keṭṭaddara bhēdavannaritu nam'malli obbanantādanallā. Idarinda ivanu kaicāci jīvavr̥kṣada phalavannu saha tegedu tindu śāśvatavāgi badukuvavanāgabāradu andukoṇḍu
23 ಅವನು ಉತ್ಪತ್ತಿಯಾದ ಭೂವಿುಯನ್ನೇ ವ್ಯವಸಾಯ ಮಾಡುವದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಡಿಸಿಬಿಟ್ಟನು.
 
Avanu utpattiyāda bhūviuyannē vyavasāya māḍuvadakkāgi avanannu ēden tōṭadinda horaḍisibiṭṭanu.
24 ಅದಲ್ಲದೆ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಆತನು ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.
 
Adallade jīvavr̥kṣakke hōguva dāriyannu kāyuvadakke ātanu ēden vanada pūrvadikkinalli kerūbiyarannū dhagadhagane prajvalisuttā suttuva kattiyannū irisidanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.