PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.2.1

ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು.
 
Hīge bhūmyākāśagaḷū avugaḷalliruva samastavū nirmitavādavu.

ಆದಿಕಾಂಡ 2
ಆದಿಕಾಂಡ 2:1-3

The Seventh Day—God Rest

The Seventh Day—God Rest
1 ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು.
 
Hīge bhūmyākāśagaḷū avugaḷalliruva samastavū nirmitavādavu.
2 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡನು.
 
Dēvaru tanna sr̥ṣṭikāryavannu mugisibiṭṭu ēḷaneya dinadalli viśraviusikoṇḍanu.
3 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿ ಆ ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.
 
Dēvaru tanna sr̥ṣṭikāryavannu mugisi ā ēḷaneya dinadalli viśraviusikoṇḍaddarinda ā dinavannu pariśud'dha dinavāgirali endu āśīrvadisidanu.

Man and Woman in the Garden

The First Man - Adam
4 ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.
 
Idē bhūmyākāśagaḷa nirmāṇa caritre.
5 ಯೆಹೋವದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ಗಿಡವಾದರೂ ಭೂವಿುಯಲ್ಲಿ ಇರಲಿಲ್ಲ, ಯಾವ ಪಲ್ಯವೂ ಹುಟ್ಟಿರಲಿಲ್ಲ. ಯಾಕಂದರೆ ಯೆಹೋವದೇವರು ಭೂವಿುಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ; ಭೂವಿುಯನ್ನು ವ್ಯವಸಾಯ ಮಾಡುವದಕ್ಕೆ ಮನುಷ್ಯನೂ ಇರಲಿಲ್ಲ.
 
Yehōvadēvaru bhūmyākāśagaḷannu uṇṭumāḍidāga yāva giḍavādarū bhūviuyalli iralilla, yāva palyavū huṭṭiralilla. Yākandare yehōvadēvaru bhūviuya mēle maḷeyannu surisiralilla; bhūviuyannu vyavasāya māḍuvadakke manuṣyanū iralilla.
6 ಆದರೂ ಭೂವಿುಯಿಂದ ಮಂಜು ಹಬ್ಬಿ ನೆಲವನ್ನೆಲ್ಲಾ ತೋಯಿಸುತ್ತಿತ್ತು.
 
Ādarū bhūviuyinda man̄ju habbi nelavannellā tōyisuttittu.
7 ಹೀಗಿರಲು ಯೆಹೋವದೇವರು ನೆಲದ#2.7 ಆದಿ. 3.19,23; ಕೀರ್ತ. 103.14, ನೆಲ ಎಂಬದಕ್ಕೆ ಮೂಲಭಾಷೆಯಲ್ಲಿ ಅದಾಮಾ. ಮನುಷ್ಯ ಎಂಬದಕ್ಕೆ ಆದಾಮ್. ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.
 
Hīgiralu yehōvadēvaru nelada maṇṇininda manuṣyanannu rūpisi avana mūginalli jīvaśvāsavannu ūdidanu; āga manuṣyanu badukuva prāṇiyādanu.
God’s Garden - Tree of Life & Knowledge
8 ಇದಲ್ಲದೆ ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.
 
Idallade yehōvadēvaru mūḍaṇa dikkinalliruva ēden sīmeyalli ondu udyānavanavannu māḍi tānu rūpisida manuṣyanannu adaralli irisidanu.
9 ಮತ್ತು ಯೆಹೋವದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂವಿುಯಲ್ಲಿ ಬೆಳೆಯ ಮಾಡಿದನು. ಅದಲ್ಲದೆ ಆ ವನಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷವನ್ನೂ ಬೆಳೆಯಿಸಿದನು.
 
Mattu yehōvadēvaru nōṭakke ramyavāgiyū ūṭakke anukūlavāgiyū iruva ellā tarada maragaḷannu ā bhūviuyalli beḷeya māḍidanu. Adallade ā vanamadhyadalli jīvadāyaka vr̥kṣavannū oḷḷēdara keṭṭaddara aruhannu huṭṭisuva vr̥kṣavannū beḷeyisidanu.
10 ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು. ಅದು ಆಚೇ ಕಡೆಯಲ್ಲಿ ಒಡೆದು ನಾಲ್ಕು ಶಾಖೆಗಳಾಯಿತು.
 
Ēden sīmeyalli ondu nadi huṭṭi ā vanavannu tōyisuttittu. Adu ācē kaḍeyalli oḍedu nālku śākhegaḷāyitu.
11 ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವದು.
 
Modalaneyadara hesaru pīśōn; adu baṅgāra dorakuva havīla dēśavannellā suttuvadu.
12 ಆ ದೇಶದ ಬಂಗಾರವು ಶ್ರೇಷ್ಠವಾದದ್ದು; ಅಲ್ಲಿ ಬದೋಲಖ ಧೂಪವೂ ಗೋಮೇಧಿಕ ರತ್ನವೂ ಸಿಕ್ಕುತ್ತವೆ.
 
Ā dēśada baṅgāravu śrēṣṭhavādaddu; alli badōlakha dhūpavū gōmēdhika ratnavū sikkuttave.
13 ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತುವದು.
 
Eraḍaneya nadiya hesaru gīhōn; adu kūṣ dēśavannellā suttuvadu.
14 ಮೂರನೆಯ ನದಿಯ ಹೆಸರು ಹಿದ್ದೆಕೆಲ್;#2.14 ಹಿದ್ದೆಕೆಲ್ ಎಂಬದು ಟೈಗ್ರಿಸ್ ನದಿ. ದಾನಿ. 10.4. ಅದು ಅಶ್ಶೂರ್ ದೇಶದ ಮುಂದೆ ಹರಿಯುವದು. ನಾಲ್ಕನೆಯದು ಯೂಫ್ರೇಟೀಸ್ ನದಿ.
 
Mūraneya nadiya hesaru hiddekel; adu aśśūr dēśada munde hariyuvadu. Nālkaneyadu yūphrēṭīs nadi.
15 ಯೆಹೋವದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.
 
Yehōvadēvaru ā manuṣyanannu karakoṇḍu hōgi ēden tōṭavannu vyavasāya māḍuvadakkū kāyuvadakkū adaralli iṭṭanu.
16 ಇದಲ್ಲದೆ ಯೆಹೋವದೇವರು ಆ ಮನುಷ್ಯನಿಗೆ - ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಫವಾಗಿ ತಿನ್ನಬಹುದು;
 
Idallade yehōvadēvaru ā manuṣyanige - nīnu tōṭadalliruva ellā maragaḷa haṇṇugaḷannu yathēcphavāgi tinnabahudu;
17 ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇಹೋಗುವಿ ಎಂದು ವಿಧಿಸಿದನು.
 
Oḷḷēdara keṭṭaddara aruhannu huṭṭisuva marada haṇṇannu mātra tinnabāradu; tinda dina sattēhōguvi endu vidhisidanu.
The First Woman - Eve
18 ಮತ್ತು ಯೆಹೋವದೇವರು - ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು.
 
Mattu yehōvadēvaru - manuṣyanu oṇṭiganāgiruvadu oḷḷēdalla; avanige saribīḷuva sahakāriyannu uṇṭumāḍuvenu andanu.
19 ಆಗ ಆತನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿ - ಇವುಗಳಿಗೆ ಆ ಮನುಷ್ಯನು ಏನೇನು ಹೆಸರಿಡುವನು ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಹೆಸರಾಯಿತು.
 
Āga ātanu ellā bhūjantugaḷannū ākāśada pakṣigaḷannū maṇṇininda nirmisi - ivugaḷige ā manuṣyanu ēnēnu hesariḍuvanu nōḍōṇa endu avana baḷige baramāḍidanu. Manuṣyanu ondondu prāṇige yāva yāva hesariṭṭanō adē hesarāyitu.
20 ಹೀಗೆ ಆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡು ಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಬೀಳುವ ಸಹಕಾರಿ ಕಾಣಿಸಲಿಲ್ಲ.
 
Hīge ā manuṣyanu ellā paśugaḷigū ākāśada pakṣigaḷigū kāḍu mr̥gagaḷigū hesariṭṭanu. Ādare ā manuṣyanige saribīḷuva sahakāri kāṇisalilla.
21 ಹೀಗಿರುವಲ್ಲಿ ಯೆಹೋವದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ
 
Hīgiruvalli yehōvadēvaru ā manuṣyanige gāḍhanidreyannu baramāḍi avana pakkeya elubugaḷalli ondannu tegedukoṇḍu adara sthaḷavannu mānsadinda mucci
22 ತಾನು ಮನುಷ್ಯನಿಂದ ತೆಗೆದಿದ್ದ ಎಲುಬನ್ನು ಸ್ತ್ರೀಯಾಗ ಮಾಡಿ ಆಕೆಯನ್ನು ಅವನ ಬಳಿಗೆ ಕರತಂದನು.
 
Tānu manuṣyaninda tegedidda elubannu strīyāga māḍi ākeyannu avana baḷige karatandanu.
23 ಅವನು ಆಕೆಯನ್ನು ನೋಡಿ- ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ; ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು ಅಂದನು.
 
Avanu ākeyannu nōḍi- īga sari; īkeyu nanna elubugaḷinda banda elubū nanna mānsadinda banda mānsavū āgiddāḷe; īkeyu naraninda utpattiyāda kāraṇa nārī ennisikoḷḷuvaḷu andanu.
24 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.#2.24 ಅಥವಾ: ಶರೀರವಾಗುತ್ತಾರೆ.
 
Ī kāraṇadinda puruṣanu tandetāyigaḷannu biṭṭu tanna heṇḍatiyannu sērikoḷḷuvanu; avaribbaru ondē śarīravāgiruvaru.
Naked - Not Ashamed
25 ಆ ಸ್ತ್ರೀಪುರುಷರಿಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.
 
Ā strīpuruṣaribbaru bettaleyāgiddarū nācikoḷḷalilla.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.