PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.14.1

ಆ ದಿವಸಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು. ಏಲಾವಿುನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು
 
Ā divasagaḷalli śinārina arasanāda amrāphelanu, ellasārina arasanāda ariyōkanu. Ēlāviuna arasanāda kedorlagōmaranu, gōyimada arasanāda tidgālanu ī nālvaru

ಆದಿಕಾಂಡ 14
ಆದಿಕಾಂಡ 14:1-9

The War of the Kings

1 ಆ ದಿವಸಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು. ಏಲಾವಿುನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು
 
Ā divasagaḷalli śinārina arasanāda amrāphelanu, ellasārina arasanāda ariyōkanu. Ēlāviuna arasanāda kedorlagōmaranu, gōyimada arasanāda tidgālanu ī nālvaru
4 ಬೆರಗ ಮೊದಲಾದ ಇವರು ಹನ್ನೆರಡು ವರುಷ ಕೆದೊರ್ಲಗೋಮರನಿಗೆ ಅಧೀನರಾಗಿದ್ದು ಹದಿಮೂರನೆಯ ವರುಷದಲ್ಲಿ ತಿರುಗಿಬಿದ್ದರು.
 
Beraga modalāda ivaru hanneraḍu varuṣa kedorlagōmaranige adhīnarāgiddu hadimūraneya varuṣadalli tirugibiddaru.
5 ಹದಿನಾಲ್ಕನೆಯ ವರುಷದಲ್ಲಿ ಕೆದೊರ್ಲಗೋಮರನೂ ಅವನಿಗೆ ಸೇರಿದ್ದ ರಾಜರೂ ಬಂದು ಅಷ್ಟರೋತ್ ಕರ್ನಯಿವಿುನಲ್ಲಿ ರೆಫಾಯರನ್ನೂ ಹಾವಿುನಲ್ಲಿ ಜೂಜ್ಯರನ್ನೂ ಶಾವೆಕಿರ್ಯಾತಯಿವಿುನಲ್ಲಿ ಏವಿುಯರನ್ನೂ ಸೋಲಿಸಿದರು.
 
Hadinālkaneya varuṣadalli kedorlagōmaranū avanige sēridda rājarū bandu aṣṭarōt karnayiviunalli rephāyarannū hāviunalli jūjyarannū śāvekiryātayiviunalli ēviuyarannū sōlisidaru.
6 ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು ಅಲ್ಲೇ ಸೋಲಿಸಿ ಮರಳುಕಾಡಿನ ಹತ್ತಿರವಿರುವ ಏಲ್ಪಾರಾನಿನವರೆಗೂ ಹಿಂದಟ್ಟಿದರು.
 
Idallade sēyīremba beṭṭada sīmeyalli vāsavāgidda hōriyarannu allē sōlisi maraḷukāḍina hattiraviruva ēlpārāninavaregū hindaṭṭidaru.
7 ಆಮೇಲೆ ಅವರು ಹಿಂದಿರುಗಿಕೊಂಡು ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಅಮಾಲೇಕ್ಯರ ಸಮಸ್ತದೇಶವನ್ನೂ ಹಚಚೋನ್‍ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು.
 
Āmēle avaru hindirugikoṇḍu kādēś ennuva enmiṣpāṭige bandu amālēkyara samastadēśavannū hacacōn‍tāmarinalli vāsavāgidda amōriyarannū jayisidaru.
8 ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯೀಮ್, ಚೋಗರೆಂಬ ಬೇಲಗ್ ಈ ಪಟ್ಟಣಗಳ ರಾಜರು ಹೊರಟು ಅವರಿಗೆದುರಾಗಿ,
 
Āga sodōm, gomōra, admāha, cebōyīm, cōgaremba bēlag ī paṭṭaṇagaḷa rājaru horaṭu avarigedurāgi,
9 ಅಂದರೆ ಏಲಾವಿುನ ಅರಸನಾದ ಕೆದೂರ್ಲಗೋಮರ್, ಗೋಯಿಮದ ಅರಸನಾದ ತಿದ್ಗಾಲ, ಶಿನಾರಿನ ಅರಸನಾದ ಅಮ್ರಾಫೆಲ, ಎಲ್ಲಸಾರಿನ ಅರಸನಾದ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮೆಂಬ ತಗ್ಗುಮೈದಾನದಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು.
 
Andare ēlāmina arasanāda kedūrlagōmar, gōyimada arasanāda tidgāla, śinārina arasanāda amrāphela, ellasārina arasanāda ariyōka ivarige virōdhavāgi siddīmemba taggumaidānadalli tam'ma daṇḍannu nillisidaru. Hīge nālku mandi rājaru aidu mandi rājarannu edurisidaru.

Abram Rescues Lot

10 ಆದರೆ ಸಿದ್ದೀಮ್ ತಗ್ಗಿನಲ್ಲಿ ಕಲ್ಲರಗಿನ ಕೆಸರುಕುಣಿಗಳು ತುಂಬಾ ಇದ್ದವು. ಸೊದೋಮ್ ಗೊಮೋರಗಳ ರಾಜರ ಕಡೆಯವರು ಓಡಿಹೋಗುವಾಗ ಆ ಕುಣಿಗಳಲ್ಲಿ ಬಿದ್ದು ಸತ್ತರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.
 
Ādare siddīm tagginalli kallaragina kesarukuṇigaḷu tumbā iddavu. Sodōm gomōragaḷa rājara kaḍeyavaru ōḍ'̔ihōguvāga ā kuṇigaḷalli biddu sattaru; uḷidavaru beṭṭagaḷige ōḍ'̔ihōdaru.
11 ಗೆದ್ದವರು ಸೊದೋಮ್ ಗೊಮೋರ ಪಟ್ಟಣಗಳನ್ನು ಸೂರೆಮಾಡಿ ಅವುಗಳಲ್ಲಿದ್ದ ಎಲ್ಲಾ ಆಸ್ತಿಯನ್ನೂ ದವಸವನ್ನೂ ತೆಗೆದುಕೊಂಡು ಹೋದರು.
 
Geddavaru sodōm gomōra paṭṭaṇagaḷannu sūremāḍi avugaḷallidda ellā āstiyannū davasavannū tegedukoṇḍu hōdaru.
12 ಸೊದೋವಿುನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
 
Sodōviunalli vāsavāgidda abrāmana tam'mana maganāda lōṭanannū avana āsti sahita hiḍidukoṇḍu hōdaru.
13 ತಪ್ಪಿಸಿಕೊಂಡವನೊಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಬಂದು ಇದನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆಯನು ಎಷ್ಕೋಲ ಆನೇರರಿಗೆ ಸಹೋದರನು; ಇವರಿಬ್ಬರಿಗೂ ಅಬ್ರಾಮನಿಗೂ ಒಡಂಬಡಿಕೆಯಿತ್ತು.
 
Tappisikoṇḍavanobbanu ibriyanāda abrāmana baḷige bandu idannu tiḷisidanu. Abrāmanu amōriyanāda mamreyana tōpina baḷiyalli vāsavāgiddanu. Mamreyanu eṣkōla ānērarige sahōdaranu; ivaribbarigū abrāmanigū oḍambaḍikeyittu.
14 ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೆ ಹಿಂದಟ್ಟಿದನು.
 
Abrāmanu tanna tam'mana maganu serege sikkiddannu kēḷi tanna maneyallē huṭṭi beḷeda śikṣitarāda munnūra hadineṇṭu mandi āḷugaḷannu yud'dhakke sid'dhamāḍikoṇḍu horaṭu ā rājarannu dānūrinavarege hindaṭṭidanu.
15 ಆಗ ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗ ಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು ಹೊಡೆದು ದಮಸ್ಕಪಟ್ಟಣದ ಉತ್ತರ ಕಡೆಯಲ್ಲಿರುವ ಹೋಬಾ ಊರಿನ ತನಕ ಹಿಂದಟ್ಟಿದನು.
 
Āga avanu rātri vēḷeyalli tanna daṇḍannu eraḍu bhāga māḍi tanna bhaṭaroḍane avara mēle biddu hoḍedu damaskapaṭṭaṇada uttara kaḍeyalliruva hōbā ūrina tanaka hindaṭṭidanu.
16 ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತೆಗೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ ಸೆರೆಯಲ್ಲಿದ್ದ ಸ್ತ್ರೀಯರನ್ನೂ ವಿುಕ್ಕಾದವರನ್ನೂ ತೆಗೆದುಕೊಂಡು ಬಂದನು.
 
Rājaru apaharisidda ellā vastugaḷannu avanu tegedukoṇḍanu. Tanna tam'mana maganāda lōṭanannū avana āstiyannū biḍisikoṇḍaddallade sereyallidda strīyarannū viukkādavarannū tegedukoṇḍu bandanu.

Melchizedek Blesses Abram

17 ಅವನು ಕೆದೊರ್ಲಗೋಮರನನ್ನೂ ಅವನೊಂದಿಗೆ ಇದ್ದ ರಾಜರನ್ನೂ ಹೊಡೆದು ಬಂದಮೇಲೆ ಸೊದೋವಿುನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಎದುರುಗೊಂಡನು.
 
Avanu kedorlagōmaranannū avanondige idda rājarannū hoḍedu bandamēle sodōviuna arasanu avanannu arasana taggu ennisikoḷḷuva śāve tagginalli edurugoṇḍanu.
18 ಸಾಲೇವಿುನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದು ಅಬ್ರಾಮನನ್ನು ಆಶೀರ್ವದಿಸಿ -
 
Sālēviuna arasanāda melkīcedekanu saha bandu roṭṭiyannū drākṣārasavannū koṭṭanu. Ivanu parātparanāda dēvara yājakanāgiddu abrāmanannu āśīrvadisi -
19 ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ;
 
Bhūmyākāśagaḷannu nirmāṇamāḍida parātparanāda dēvara āśīrvādavu abrāmanige āgali;
20 ಪರಾತ್ಪರನಾದ ದೇವರು ನಿನ್ನ ಶತೃಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು.
 
Parātparanāda dēvaru ninna śatr̥gaḷannu ninna kaige oppisiddakkāgi ātanige stōtra endu hēḷidanu. Abrāmanu tānu geddu tandidda ellā vastugaḷalli hattaneya ondu bhāgavannu avanige koṭṭanu.
21 ಸೊದೋವಿುನ ಅರಸನು ಅಬ್ರಾಮನಿಗೆ - ನೀನು ಬಿಡಿಸಿದ ಜನರನ್ನು ನನಗೆ ಒಪ್ಪಿಸು;
 
Sodōviuna arasanu abrāmanige - nīnu biḍisida janarannu nanage oppisu;
24 ಆಳುಗಳು ತಿಂದದ್ದು ಹೊರತು ನನ್ನ ಜೊತೆಯವರಾದ ಆನೇರ ಎಷ್ಕೋಲ ಮಮ್ರೆಯರಿಗೆ ಬರತಕ್ಕ ಪಾಲು ಮಾತ್ರ ಇರಲಿ ಎಂದು ಹೇಳಿದನು.
 
Āḷugaḷu tindaddu horatu nanna joteyavarāda ānēra eṣkōla mamreyarige baratakka pālu mātra irali endu hēḷidanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.