PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.12.1
KANJV-BSI ದೇವರು

ಯೆಹೋವನು ಅಬ್ರಾಮನಿಗೆ - ನೀನು ಸ್ವದೇಶವನ್ನೂ ಬಂಧು ಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು.
 
Yehōvanu abrāmanige - nīnu svadēśavannū bandhu baḷagavannū tandeya maneyannū biṭṭu nānu tōrisuva dēśakke horaṭuhōgu.

ಆದಿಕಾಂಡ 12
ಆದಿಕಾಂಡ 12:1-9

The Call of Abram

1 ಯೆಹೋವನು ಅಬ್ರಾಮನಿಗೆ - ನೀನು ಸ್ವದೇಶವನ್ನೂ ಬಂಧು ಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು.
 
Yehōvanu abrāmanige - nīnu svadēśavannū bandhu baḷagavannū tandeya maneyannū biṭṭu nānu tōrisuva dēśakke horaṭuhōgu.
2 ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು.
 
Nānu ninnannu doḍḍa janāṅgavāguvante māḍi āśīrvadisi ninna hesarannu prakhyātige taruvenu.
3 ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ#12.3 ಅಥವಾ: ಭೂಲೋಕದ ಎಲ್ಲಾ ಕುಲದವರೂ ನಿನಗಿರುವಂಥ ಆಶೀರ್ವಾದವೇ ತಮಗೂ ಆಗಬೇಕೆಂದು ಕೋರುವರು. ಆದಿ. 18.18; 22.18; 26.5; 28.14; ಅ. ಕೃ. 3.25; ಗಲಾ. 3.8,16. ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.
 
Nīnu āśīrvādanidhiyāguvi. Ninnannu harasuvavarannu harasuvenu; ninnannu śapisuvavarannu śapisuvenu. Ninna mūlaka bhūlōkada ellā kuladavarigū āśīrvādavuṇṭāguvadu endu hēḷidanu.
4 ಯೆಹೋವನು ಹೇಳಿದ ಮೇರೆಗೆ ಅಬ್ರಾಮನು ಹೊರಟುಹೋದನು; ಲೋಟನೂ ಸಂಗಡ ಹೋದನು. ಅಬ್ರಾಮನು ಖಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು.
 
Yehōvanu hēḷida mērege abrāmanu horaṭuhōdanu; lōṭanū saṅgaḍa hōdanu. Abrāmanu khārān paṭṭaṇavannu biṭṭu horaṭāga eppattaidu varuṣadavanāgiddanu.
5 ಅವನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತಾನೂ ಲೋಟನೂ ಖಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ ದಾಸದಾಸಿಯರನ್ನೂ ತೆಗೆದುಕೊಂಡು ಹೋಗಿ ಕಾನಾನ್ ದೇಶಕ್ಕೆ ಸೇರಿದನು.
 
Avanu tanna heṇḍatiyāda sārayaḷannū tanna tam'mana maganāda lōṭanannū tānū lōṭanū khārāninalli sampādisidda ellā sottannū dāsadāsiyarannū tegedukoṇḍu hōgi kānān dēśakke sēridanu.
6 ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಕ್ಷೇತ್ರದಲ್ಲಿರುವ ಮೋರೆಯೆಂಬ#12.6 ಅಂದರೆ ಬೋಧಕನ ವೃಕ್ಷದ; ಆದಿ. 13.18. ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು.
 
Abrāmanu ā dēśadalli san̄carisuttā śekem kṣētradalliruva mōreyemba vr̥kṣada baḷige bandanu. Ā kāladalli kānān'yaru dēśadalliddaru.
7 ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನಕೊಟ್ಟು - ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.
 
Alli yehōvanu abrāmanige darśanakoṭṭu - nānu ī dēśavannu ninna santānakke koḍuvenu andanu. Tanage darśanakoṭṭa yehōvanige abrāmanu yajñavēdiyannu kaṭṭisidanu.
8 ಅವನು ಅಲ್ಲಿಂದ ಹೊರಟು ಬೇತೇಲಿಗೆ ಮೂಡಲಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿಸಿ ಇಳುಕೊಂಡನು; ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರೂ ಇದ್ದವು. ಅಲ್ಲಿಯೂ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
 
Avanu allinda horaṭu bētēlige mūḍalalliruva guḍḍakke bandu tanna guḍāravannu hākisi iḷukoṇḍanu; paścimakke bētēlū pūrvakke āyi emba ūrū iddavu. Alliyū yehōvanigōskara yajñavēdiyannu kaṭṭisi ātana hesarannu hēḷikoṇḍu ārādhisidanu.
9 ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್‍ದೇಶದ ದಕ್ಷಿಣಸೀಮೆಗೆ ಮುಂದೆ ಮುಂದೆ ಹೋಗುತ್ತಾ ಇದ್ದನು.
 
Taruvāya abrāmanu allinda horaṭu kānān‍dēśada dakṣiṇasīmege munde munde hōguttā iddanu.

Abram and Sarai in Egypt

10 ಆ ದೇಶದಲ್ಲಿ ಘೋರ ಕ್ಷಾಮವಿದ್ದದರಿಂದ ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದುಹೋದನು.
 
Ā dēśadalli ghōra kṣāmaviddadarinda allirade, aigupta dēśadalli kelavu kāla irabēkendu ā beṭṭada sīmeyinda iḷiduhōdanu.
11 ಅವನು ಐಗುಪ್ತದೇಶದ ಹತ್ತಿರಕ್ಕೆ ಬಂದಾಗ, ತನ್ನ ಹೆಂಡತಿಯಾದ ಸಾರಯಳಿಗೆ -
 
Avanu aiguptadēśada hattirakke bandāga, tanna heṇḍatiyāda sārayaḷige -
12 ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; ಐಗುಪ್ತದೇಶದವರು ನಿನ್ನನ್ನು ಕಂಡು - ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸಾರು.
 
Kēḷu, nīnu sundari endu nānu balle; aiguptadēśadavaru ninnannu kaṇḍu - īkeyu ivana heṇḍati endu nannannu kondu ninnannu uḷisāru.
13 ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿವಿುತ್ತ ನನಗೆ ಹಿತವಾಗುವದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು ಎಂದು ಹೇಳಿದನು.
 
Ādakāraṇa nīnu nanage taṅgiyāgabēkendu avarige hēḷu; hīge hēḷidare ninna niviutta nanage hitavāguvadu, nānu ninna deseyinda sāyade badukuvenu endu hēḷidanu.
14 ಅಬ್ರಾಮನು ಐಗುಪ್ತದೇಶಕ್ಕೆ ಬಂದಾಗ ಐಗುಪ್ತ್ಯರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿಯೆಂದರು.
 
Abrāmanu aiguptadēśakke bandāga aiguptyaru avana saṅgaḍa idda strīyannu nōḍi bahu sundariyendaru.
15 ಫರೋಹನ ಪ್ರಧಾನರು ಆಕೆಯನ್ನು ನೋಡಿ ಬಂದು ಅವನ ಮುಂದೆ ಹೊಗಳಲಾಗಿ
 
Pharōhana pradhānaru ākeyannu nōḍi bandu avana munde hogaḷalāgi
16 ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರತರಿಸಿ ಆಕೆಯ ನಿವಿುತ್ತ ಅಬ್ರಾಮನಿಗೆ ಉಪಕಾರ ಮಾಡಿದನು. ಆಗ ಅಬ್ರಾಮನಿಗೆ ಕುರಿದನಗಳೂ ಗಂಡು ಹೆಣ್ಣು ಕತ್ತೆಗಳೂ ದಾಸದಾಸಿಯರೂ ಒಂಟೆಗಳೂ ದೊರೆತವು.
 
Pharōhanu ā strīyannu aramanege karatarisi ākeya niviutta abrāmanige upakāra māḍidanu. Āga abrāmanige kuridanagaḷū gaṇḍu heṇṇu kattegaḷū dāsadāsiyarū oṇṭegaḷū doretavu.
17 ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿವಿುತ್ತ ಬಹಳ ಉಪದ್ರವಗಳನ್ನು ಉಂಟುಮಾಡಿ ಬಾಧಿಸಿದನು.
 
Ādare yehōvanu pharōhanigū avana maneyavarigū abrāmana heṇḍatiyāda sārayaḷa niviutta bahaḷa upadravagaḷannu uṇṭumāḍi bādhisidanu.
18 ಆಗ ಫರೋಹನು ಅಬ್ರಾಮನನ್ನು ಕರಿಸಿ - ಯಾಕೆ ಹೀಗೆ ಮಾಡಿದೆ? ಹೆಂಡತಿಯೆಂದು ಯಾಕೆ ನನಗೆ ತಿಳಿಸಲಿಲ್ಲ?
 
Āga pharōhanu abrāmanannu karisi - yāke hīge māḍide? Heṇḍatiyendu yāke nanage tiḷisalilla?
19 ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು ಎಂದು ಹೇಳಿ
 
Taṅgiyendu yāke hēḷide? Hīge hēḷiddarinda ākeyannu heṇḍatiyāgalikke tegedukoṇḍenallā. Igō ninna heṇḍati; karedukoṇḍu hōgu endu hēḷi
20 ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಸರ್ವಸ್ವಸಹಿತವಾಗಿ ಸಾಗಕಳುಹಿಸಿದರು.
 
Avana viṣayavāgi tanna sēvakarige appaṇekoḍalu avaru abrāmanannū avana heṇḍatiyannū avanigidda sarvasvasahitavāgi sāgakaḷuhisidaru.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.