PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.11.1

ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು. ಭಾಷಾಭೇದವೇನೂ ಇರಲಿಲ್ಲ.
 
Lōkadavarellarigū ondē bhāṣe ittu. Bhāṣābhēdavēnū iralilla.

ಆದಿಕಾಂಡ 11
ಆದಿಕಾಂಡ 11:1-9

The Tower of Babel

1 ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು. ಭಾಷಾಭೇದವೇನೂ ಇರಲಿಲ್ಲ.
 
Lōkadavarellarigū ondē bhāṣe ittu. Bhāṣābhēdavēnū iralilla.
2 ಅವರು ಪೂರ್ವದಿಕ್ಕಿಗೆ ಮುಂದೆ ಮುಂದೆ ಪ್ರಯಾಣ ಮಾಡುತ್ತಿರುವಾಗ ಶಿನಾರ್ ದೇಶದಲ್ಲಿ ಬೈಲುಸೀಮೆ ಸಿಕ್ಕಲು ಅಲ್ಲೇ ವಾಸಮಾಡಿಕೊಂಡು ತಮ್ಮ ತಮ್ಮೊಳಗೆ -
 
Avaru pūrvadikkige munde munde prayāṇa māḍuttiruvāga śinār dēśadalli bailusīme sikkalu allē vāsamāḍikoṇḍu tam'ma tam'moḷage -
3 ಬನ್ನಿ, ಒಳ್ಳೊಳ್ಳೇ ಸುಟ್ಟ ಇಟ್ಟಿಗೆಗಳನ್ನು ಮಾಡೋಣ;
 
Banni, oḷḷoḷḷē suṭṭa iṭṭigegaḷannu māḍōṇa;
4 ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂವಿುಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ ಅಂದುಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಸುಣ್ಣಕ್ಕೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
 
Ondu paṭṭaṇavannū ākāśavannu muṭṭuva gōpuravannū kaṭṭi doḍḍa hesarannu paḍeyōṇa; hīge māḍidare bhūmiya mēlellā cadaruvadakke āspadavāguvadilla andukoṇḍaru. Kaṭṭuvāga kallige badalāgi iṭṭigeyannū suṇṇakke badalāgi kallaragannū upayōgisidaru.
5 ನರಪುತ್ರರು ಕಟ್ಟುತ್ತಿದ್ದ ಆ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಯೆಹೋವನು ಇಳಿದು ಬಂದನು.
 
Naraputraru kaṭṭuttidda ā paṭṭaṇavannū gōpuravannū nōḍuvadakke yehōvanu iḷidu bandanu.
6 ನೋಡಿದ ಮೇಲೆ ಆತನು - ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇಷ್ಟು ದೊಡ್ಡ ಕೆಲಸ ಮಾಡುವವರಾಗಿರಲು ಮುಂದೆ ಏನು ಆಲೋಚಿಸಿದರೂ ಇವರಿಗೆ ಅಸಾಧ್ಯವಲ್ಲ.
 
Nōḍida mēle ātanu - ivaru ondē janāṅga; ivarellarigū ondē bhāṣe. Prārambhadallē iṣṭu doḍḍa kelasa māḍuvavarāgiralu munde ēnu ālōcisidarū ivarige asādhyavalla.
7 ನಾವು ಇಳಿದು ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ತಾರುಮಾರುಮಾಡೋಣ ಬನ್ನಿ ಅಂದನು.
 
Nāvu iḷidu ivaralli obbara mātu obbarige tiḷiyadante ivara bhāṣeyannu tārumārumāḍōṇa banni andanu.
8 ಹಾಗೆಯೇ ಮಾಡಿ ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು. ಅವರು ಆ ಪಟ್ಟಣ ಕಟ್ಟುವದನ್ನು ನಿಲ್ಲಿಸಿಬಿಟ್ಟರು.
 
Hāgeyē māḍi yehōvanu avarannu allinda bhūlōkadallellā cadarisidanu. Avaru ā paṭṭaṇa kaṭṭuvadannu nillisibiṭṭaru.
9 ಸಮಸ್ತಲೋಕದ ಭಾಷೆಯನ್ನು ಯೆಹೋವನು ಅಲ್ಲಿ ತಾರುಮಾರುಮಾಡಿ ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್#11.9 ತಾರುಮಾರು ಎಂಬರ್ಥವಿದ್ದಂತೆ. ಎಂಬ ಹೆಸರಾಯಿತು.
 
Samastalōkada bhāṣeyannu yehōvanu alli tārumārumāḍi avarannu allinda bhūlōkadallellā cadarisiddarinda ā paṭṭaṇakke bābel emba hesarāyitu.

Genealogy from Shem to Abram

10 ಶೇಮನ ವಂಶದವರ ಚರಿತ್ರೆಯು. ಜಲಪ್ರಳಯವು ಕಳೆದು ಎರಡು ವರುಷಗಳಾದ ಮೇಲೆ ಶೇಮನು ನೂರು ವರುಷದವನಾಗಿ ಅರ್ಪಕ್ಷದನನ್ನು ಪಡೆದನು.
 
Śēmana vanśadavara caritreyu. Jalapraḷayavu kaḷedu eraḍu varuṣagaḷāda mēle śēmanu nūru varuṣadavanāgi arpakṣadanannu paḍedanu.
11 ಅವನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರುಷ ಬದುಕಿದನು.
 
Avanu arpakṣadanannu paḍeda mēle gaṇḍu heṇṇu makkaḷannu paḍedu ainūru varuṣa badukidanu.
12 ಅರ್ಪಕ್ಷದನು ಮೂವತ್ತೈದು ವರುಷದವನಾಗಿ ಶೆಲಹನನ್ನು ಪಡೆದನು.
 
Arpakṣadanu mūvattaidu varuṣadavanāgi śelahanannu paḍedanu.
13 ಅವನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರುಷ ಬದುಕಿದನು.
 
Avanu śelahanannu paḍeda mēle gaṇḍu heṇṇu makkaḷannu paḍedu nānūra mūru varuṣa badukidanu.
14 ಶೆಲಹನು ಮೂವತ್ತು ವರುಷದವನಾಗಿ ಎಬರನನ್ನು ಪಡೆದನು.
 
Śelahanu mūvattu varuṣadavanāgi ebaranannu paḍedanu.
15 ಅವನು ಎಬರನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರುಷ ಬದುಕಿದನು.
 
Avanu ebaranannu paḍeda mēle gaṇḍu heṇṇu makkaḷannu paḍedu nānūra mūru varuṣa badukidanu.
16 ಎಬರನು ಮೂವತ್ತು ನಾಲ್ಕು ವರುಷದವನಾಗಿ ಪೆಲೆಗನನ್ನು ಪಡೆದನು.
 
Ebaranu mūvattu nālku varuṣadavanāgi peleganannu paḍedanu.
17 ಅವನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರುಷ ಬದುಕಿದನು.
 
Avanu peleganannu paḍeda mēle gaṇḍu heṇṇu makkaḷannu paḍedu nānūra mūvattu varuṣa badukidanu.
18 ಪೆಲೆಗನು ಮೂವತ್ತು ವರುಷದವನಾಗಿ ರೆಗೂವನನ್ನು ಪಡೆದನು.
 
Peleganu mūvattu varuṣadavanāgi regūvanannu paḍedanu.
19 ಅವನು ರೆಗೂವನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರುಷ ಬದುಕಿದನು.
 
Avanu regūvanannu paḍeda mēle gaṇḍu heṇṇu makkaḷannu paḍedu innūra ombhattu varuṣa badukidanu.
20 ರೆಗೂವನು ಮೂವತ್ತೆರಡು ವರುಷದವನಾಗಿ ಸೆರೂಗನನ್ನು ಪಡೆದನು.
 
Regūvanu mūvatteraḍu varuṣadavanāgi serūganannu paḍedanu.
21 ಅವನು ಸೆರಗೂನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಏಳು ವರುಷ ಬದುಕಿದನು.
 
Avanu seragūnannu paḍeda mēle gaṇḍu heṇṇu makkaḷannu paḍedu innūra ēḷu varuṣa badukidanu.
22 ಸೆರೂಗನು ಮೂವತ್ತು ವರುಷದವನಾಗಿ ನಾಹೋರನನ್ನು ಪಡೆದನು.
 
Serūganu mūvattu varuṣadavanāgi nāhōranannu paḍedanu.
23 ಅವನು ನಾಹೋರನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರು ವರುಷ ಬದುಕಿದನು.
 
Avanu nāhōranannu paḍeda mēle gaṇḍu heṇṇu makkaḷannu paḍedu innūru varuṣa badukidanu.
24 ನಾಹೋರನು ಇಪ್ಪತ್ತೊಂಭತ್ತು ವರುಷದವನಾಗಿ ತೆರಹನನ್ನು ಪಡೆದನು.
 
Nāhōranu ippattombhattu varuṣadavanāgi terahanannu paḍedanu.
25 ಅವನು ತೆರಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಭತ್ತು ವರುಷ ಬದುಕಿದನು.
 
Avanu terahanannu paḍeda mēle gaṇḍu heṇṇu makkaḷannu paḍedu nūra hattombhattu varuṣa badukidanu.
26 ತೆರಹನು ಎಪ್ಪತ್ತು ವರುಷದವನಾಗಿ ಅಬ್ರಾಮ, ನಾಹೋರ, ಹಾರಾನ ಎಂಬ ಮಕ್ಕಳನ್ನು ಪಡೆದನು.
 
Terahanu eppattu varuṣadavanāgi abrāma, nāhōra, hārāna emba makkaḷannu paḍedanu.

Terah’s Descendants

27 ತೆರಹನ ವಂಶದವರ ಚರಿತ್ರೆ. ತೆರಹನು ಅಬ್ರಾಮ ನಾಹೋರ ಹಾರಾನರನ್ನು ಪಡೆದನು.
 
Terahana vanśadavara caritre. Terahanu abrāma nāhōra hārānarannu paḍedanu.
28 ಹಾರಾನನು ಲೋಟನನ್ನು ಪಡೆದನು. ಹಾರಾನನು ತಾನು ಹುಟ್ಟಿದ ದೇಶದೊಳಗೆ ಕಲ್ದೀಯರ#11.28 ಅಥವಾ: ಕಸ್ದೀಯರ. ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆಯಾದ ತೆರಹನ ಹತ್ತಿರವೇ ಸತ್ತನು.
 
Hārānanu lōṭanannu paḍedanu. Hārānanu tānu huṭṭida dēśadoḷage kaldīyara ūr emba paṭṭaṇadalli tanna tandeyāda terahana hattiravē sattanu.
29 ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ವಿುಲ್ಕಾ; ಈಕೆಯು ಹಾರಾನನ ಮಗಳು; ಹಾರಾನನು ವಿುಲ್ಕಳಿಗೂ ಇಸ್ಕಳಿಗೂ ತಂದೆ.
 
Abrāmanū nāhōranū maduvemāḍikoṇḍaru. Abrāmana heṇḍatiya hesaru sārayaḷu, nāhōrana heṇḍatiya hesaru milkā; īkeyu hārānana magaḷu; hārānanu milkaḷigū iskaḷigū tande.
30 ಸಾರಯಳು ಬಂಜೆಯಾಗಿದ್ದದರಿಂದ ಆಕೆಗೆ ಮಕ್ಕಳಿರಲಿಲ್ಲ.
 
Sārayaḷu ban̄jeyāgiddadarinda ākege makkaḷiralilla.
31 ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನಗೆ ಮೊಮ್ಮಗನೂ ಹಾರಾನನಿಗೂ ಮಗನೂ ಆಗಿರುವ ಲೋಟನನ್ನೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನೂ ಕರಕೊಂಡು ಕಾನಾನ್‍ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟನು. ಅವರು ಹಾರಾನ್ ಪಟ್ಟಣಕ್ಕೆ ಬಂದು ಅಲ್ಲೇ ವಾಸಮಾಡಿಕೊಂಡರು.
 
Terahanu tanna maganāda abrāmanannū tanage mom'maganū hārānanigū maganū āgiruva lōṭanannū tanage soseyū abrāmanige heṇḍatiyū āgiruva sārayaḷannū karakoṇḍu kānāndēśakke hōgabēkendu kaldīyara ūr emba paṭṭaṇavannu biṭṭanu. Avaru hārān paṭṭaṇakke bandu allē vāsamāḍikoṇḍaru.
32 ತೆರಹನು ಇನ್ನೂರ ಐದು ವರುಷದವನಾಗಿ ಖಾರಾನಿನಲ್ಲಿ ಸತ್ತನು.
 
Terahanu innūra aidu varuṣadavanāgi khārāninalli sattanu.

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.