PepLamb's Audio Bible
Loading God's Word...
ನನ್ನ ಕುರಿಮರಿಗಳನ್ನು ಮೇಯಿಸಿ | ಯೋಹಾನನು 21:15-17
Gen.1.1

ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು.
 
Ādiyalli dēvaru ākāśavannū bhūviuyannū uṇṭumāḍidanu.

ಆದಿಕಾಂಡ 1
ಆದಿಕಾಂಡ 1:1-31
ಆದಿಕಾಂಡ 1:1-2

The Creation

Heaven and Earth
1 ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು.
 
Ādiyalli dēvaru ākāśavannū bhūviuyannū uṇṭumāḍidanu.
2 ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು; ಆದಿಸಾಗರದ ಮೇಲೆ ಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.
 
Bhūviuyu kramavilladeyū baridāgiyū ittu; ādisāgarada mēle kattalittu; dēvarātmavu jalasamūhagaḷa mēle calisuttittu.
The First Day—Light
3 ಆಗ ದೇವರು - ಬೆಳಕಾಗಲಿ ಅನ್ನಲು ಬೆಳಕಾಯಿತು.
 
Āga dēvaru - beḷakāgali annalu beḷakāyitu.
4 ದೇವರು ಆ ಬೆಳಕನ್ನು ಒಳ್ಳೇದೆಂದು ನೋಡಿದನು. ದೇವರು ಬೆಳಕನ್ನೂ ಕತ್ತಲೆಯನ್ನೂ ಬೇರೆ ಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟನು.
 
Dēvaru ā beḷakannu oḷḷēdendu nōḍidanu. Dēvaru beḷakannū kattaleyannū bēre bēre māḍi beḷakige hagalendū kattalege iruḷendū hesariṭṭanu.
5 ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
 
Hīge sāyaṅkālavū prātaḥkālavū āgi modalaneya dinavāyitu.
The Second Day—Heaven
6 ಬಳಿಕ ದೇವರು - ಜಲಸಮೂಹಗಳ ನಡುವೆ ವಿಸ್ತಾರವಾದ ಗುಮಟವು ಉಂಟಾಗಲಿ; ಅದು ಕೆಳಗಣ ನೀರುಗಳನ್ನೂ ಮೇಲಣ ನೀರುಗಳನ್ನೂ ಬೇರೆ ಬೇರೆ ಮಾಡಲಿ ಅಂದನು.
 
Baḷika dēvaru - jalasamūhagaḷa naḍuve vistāravāda gumaṭavu uṇṭāgali; adu keḷagaṇa nīrugaḷannū mēlaṇa nīrugaḷannū bēre bēre māḍali andanu.
7 ದೇವರು ವಿಸ್ತಾರವಾದ ಗುಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು; ಹಾಗೆಯೇ ಆಯಿತು.
 
Dēvaru vistāravāda gumaṭavannu māḍi adara keḷagidda nīrugaḷannu adara mēlidda nīrugaḷinda viṅgaḍisidanu; hāgeyē āyitu.
8 ದೇವರು ಆ ಗುಮಟಕ್ಕೆ ಆಕಾಶವೆಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಎರಡನೆಯ ದಿನವಾಯಿತು.
 
Dēvaru ā gumaṭakke ākāśavendu hesariṭṭanu. Hīge sāyaṅkālavū prātaḥkālavū āgi eraḍaneya dinavāyitu.
The Third Day—Earth, Seas and Plants
9 ಅನಂತರ ದೇವರು - ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ ಅಂದನು; ಹಾಗೆಯೇ ಆಯಿತು.
 
Anantara dēvaru - ākāśada keḷagiruva nīrellā ondē sthaḷadalli kūḍikoḷḷali, oṇanelavu kāṇisali andanu; hāgeyē āyitu.
10 ದೇವರು ಒಣನೆಲಕ್ಕೆ ಭೂವಿುಯೆಂದೂ ಜಲಸಮೂಹಕ್ಕೆ ಸಮುದ್ರವೆಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೇದೆಂದು ನೋಡಿದನು.
 
Dēvaru oṇanelakke bhūviuyendū jalasamūhakke samudravendū hesariṭṭanu. Ātanu adannu oḷḷēdendu nōḍidanu.
11 ತರುವಾಯ ದೇವರು - ಭೂವಿುಯು ಹುಲ್ಲನ್ನೂ ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಸಲಿ; ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನೂ ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ ಎಂದು ಹೇಳಿದನು; ಹಾಗೆಯೇ ಆಯಿತು.
 
Taruvāya dēvaru - bhūviuyu hullannū bījabiḍuva kāyipalyada giḍagaḷannū beḷesali; mattu bījavuḷḷa haṇṇina maragaḷannū avugaḷa jātiganusāravāgi huṭṭisali endu hēḷidanu; hāgeyē āyitu.
12 ಭೂವಿುಯಲ್ಲಿ ಹುಲ್ಲು ಬೆಳೆಯಿತು; ತಮ್ಮತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು; ತಮ್ಮತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಕಾಣಿಸಿದವು. ದೇವರು ಅದನ್ನು ಒಳ್ಳೇದೆಂದು ನೋಡಿದನು.
 
Bhūviuyalli hullu beḷeyitu; tam'matam'ma jātiya prakāra bījabiḍuva kāyipalyada giḍagaḷu uṇṭādavu; tam'matam'ma jātiganusāravāgi bījavuḷḷa haṇṇina maragaḷu kāṇisidavu. Dēvaru adannu oḷḷēdendu nōḍidanu.
13 ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು.
 
Hīge sāyaṅkālavū prātaḥkālavū āgi mūraneya dinavāyitu.
The Fourth Day—Sun, Moon, and Stars
14 ಬಳಿಕ ದೇವರು - ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ; ಇದಲ್ಲದೆ ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ;
 
Baḷika dēvaru - ākāśamaṇḍaladalli beḷakugaḷu uṇṭāgali; avu hagaliruḷugaḷannu bēre bēre māḍali; idallade avu gurutugaḷāgiddu samayagaḷannū dinasanvatsaragaḷannū tōrisali;
15 ಮತ್ತು ಭೂವಿುಯ ಮೇಲೆ ಬೆಳಕುಕೊಡುವದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ ಅಂದನು; ಹಾಗೆಯೇ ಆಯಿತು.
 
Mattu bhūviuya mēle beḷakukoḍuvadakke avu ākāśamaṇḍaladalli dīpagaḷantirali andanu; hāgeyē āyitu.
16 ದೇವರು ಹಗಲನ್ನಾಳುವದಕ್ಕೆ ದೊಡ್ಡ ಬೆಳಕನ್ನೂ ಇರುಳನ್ನಾಳುವದಕ್ಕೆ ಚಿಕ್ಕ ಬೆಳಕನ್ನೂ, ಈ ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟುಮಾಡಿದನು.
 
Dēvaru hagalannāḷuvadakke doḍḍa beḷakannū iruḷannāḷuvadakke cikka beḷakannū, ī eraḍu doḍḍa beḷakugaḷannu uṇṭumāḍidanu. Ātanu nakṣatragaḷannu saha uṇṭumāḍidanu.
17 ದೇವರು ಆ ಬೆಳಕುಗಳನ್ನು ಆಕಾಶದಲ್ಲಿಟ್ಟು ಭೂವಿುಯ ಮೇಲೆ ಬೆಳಕು ಕೊಡುವದಕ್ಕೂ
 
Dēvaru ā beḷakugaḷannu ākāśadalliṭṭu bhūviuya mēle beḷaku koḍuvadakkū
18 ಹಗಲಿರುಳುಗಳನ್ನು ಆಳುವದಕ್ಕೂ ಬೆಳಕನ್ನು ಕತ್ತಲನ್ನು ಬೇರೆ ಬೇರೆ ಮಾಡುವದಕ್ಕೂ ಅವುಗಳನ್ನು ನೇವಿುಸಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
 
Hagaliruḷugaḷannu āḷuvadakkū beḷakannu kattalannu bēre bēre māḍuvadakkū avugaḷannu nēviusidanu. Ātanu adannu oḷḷēdendu nōḍidanu.
19 ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.
 
Hīge sāyaṅkālavū prātaḥkālavū āgi nālkaneya dinavāyitu.
The Fifth Day—Fish and Birds
20 ತರುವಾಯ ದೇವರು - ಗುಂಪುಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಅಂತರಿಕ್ಷದೊಳಗೆ ಹಾರಾಡಲಿ ಎಂದು ಹೇಳಿದನು.
 
Taruvāya dēvaru - gumpugumpāgi calisuva jalajantugaḷu nīrinalli tumbikoḷḷali; pakṣigaḷu bhūviuya mēle antarikṣadoḷage hārāḍali endu hēḷidanu.
21 ಹೀಗೆ ದೇವರು ಮಹಾಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
 
Hīge dēvaru mahājalacaragaḷannū nīrinalli tumbiruva sakalavidhavāda jīvigaḷannū rekkegaḷuḷḷa sakalavidhavāda pakṣigaḷannū avugaḷa jātiganusāravāgi uṇṭumāḍidanu. Ātanu adannu oḷḷēdendu nōḍidanu.
22 ಇದಲ್ಲದೆ ದೇವರು ಅವುಗಳಿಗೆ - ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಹೆಚ್ಚಲಿ ಎಂದು ಹೇಳಿ ಆಶೀರ್ವದಿಸಿದನು.
 
Idallade dēvaru avugaḷige - nīvu abhivr̥d'dhiyāgi hecciri; jalacaragaḷu samudrada nīrinalli tumbikoḷḷali; pakṣigaḷu bhūviuya mēle heccali endu hēḷi āśīrvadisidanu.
23 ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು.
 
Hīge sāyaṅkālavū prātaḥkālavū āgi aidaneya dinavāyitu.
The Sixth Day—Land Animals and Mankind
24 ಮತ್ತು ದೇವರು - ಭೂವಿುಯಿಂದ ಜೀವಜಂತುಗಳು ಉಂಟಾಗಲಿ; ಪಶುಕ್ರಿವಿುಗಳೂ ಕಾಡುಮೃಗಗಳೂ ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ ಅಂದನು; ಹಾಗೆಯೇ ಆಯಿತು.
 
Mattu dēvaru - bhūviuyinda jīvajantugaḷu uṇṭāgali; paśukriviugaḷū kāḍumr̥gagaḷū tam'ma tam'ma jātiganusāravāgi huṭṭali andanu; hāgeyē āyitu.
25 ದೇವರು ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳನ್ನೂ ಅವುಗಳ ಜಾತಿಗನುಸಾರ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
 
Dēvaru kāḍumr̥gagaḷannū paśugaḷannū nelada mēle haridāḍuva kriviukīṭagaḷannū avugaḷa jātiganusāra uṇṭumāḍidanu. Ātanu adannu oḷḷēdendu nōḍidanu.
26 ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಕೀಟಗಳ ಮೇಲೆಯೂ ಎಲ್ಲಾ ಭೂವಿುಯ ಮೇಲೆಯೂ ದೊರೆತನಮಾಡಲಿ ಅಂದನು.
 
Āmēle dēvaru - nam'ma svarūpadalli nam'ma hōlikege sariyāgi manuṣyarannu uṇṭumāḍōṇa; avaru samudradalliruva mīnugaḷa mēleyū antarikṣadalli hārāḍuva pakṣigaḷa mēleyū paśugaḷa mēleyū nelada mēle haridāḍuva ellā krimikīṭagaḷa mēleyū ellā bhūmiya mēleyū doretanamāḍali andanu.
27 ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
 
Hīge dēvaru manuṣyanannu tanna svarūpadalli uṇṭumāḍidanu; dēvasvarūpadalli avanannu uṇṭumāḍidanu; avarannu gaṇḍ'̔uheṇṇāgi nirmisidanu.
28 ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ - ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂವಿುಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂವಿುಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ ಅಂದನು.
 
Idallade dēvaru avarannu āśīrvadisi - nīvu bahusantānavuḷḷavarāgi hecciri; bhūmiyalli tumbikoṇḍu adannu vaśamāḍikoḷḷiri. Samudrada mīnugaḷa mēleyū ākāśada pakṣigaḷa mēleyū bhūmiyalli calisuva ellā jīvigaḷa mēleyū doretanamāḍiri andanu.
29 ಮತ್ತು ದೇವರು - ಇಗೋ, ಸಮಸ್ತಭೂವಿುಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ.
 
Mattu dēvaru - igō, samastabhūviuya mēle bījavuḷḷa ellā pairugaḷannū bījavuḷḷa ellā haṇṇina maragaḷannū nimage āhārakkāgi koṭṭiddēne.
30 ಇದಲ್ಲದೆ ಭೂವಿುಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿವಿುಕೀಟಗಳು ಎಂಬ ಜೀವಿಗಳಿಗೆ ಎಲ್ಲಾ ಹುಲ್ಲುಸೊಪ್ಪುಗಳನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಎಂದು ಹೇಳಿದನು; ಅದು ಹಾಗೆಯೇ ಆಯಿತು.
 
Idallade bhūviuya mēle tirugāḍuva mr̥gagaḷu, ākāśadalli hārāḍuva pakṣigaḷu, neladalli haridāḍuva kriviukīṭagaḷu emba jīvigaḷige ellā hullusoppugaḷannu āhārakkāgi koṭṭiddēne endu hēḷidanu; adu hāgeyē āyitu.
31 ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು. ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
 
Dēvaru tānu uṇṭumāḍiddannellā nōḍalāgi adu bahu oḷḷēdāgittu. Sāyaṅkālavū prātaḥkālavū āgi āraneya dinavāyitu.
ಆದಿಕಾಂಡ 1:1 ಗಾಗಿ ಚಿತ್ರಣಆದಿಕಾಂಡ 1:1 ಗಾಗಿ ಚಿತ್ರಣ

ಅಡ್ಡ ಉಲ್ಲೇಖಗಳು

ಈ ವಚನಕ್ಕೆ ಯಾವುದೇ ಅಡ್ಡ ಉಲ್ಲೇಖಗಳು ಲಭ್ಯವಿಲ್ಲ.